Tuesday, June 23, 2026
spot_imgspot_img
spot_imgspot_img

ಮೈಸೂರು: ಇತಿಹಾಸ ಪ್ರಸಿದ್ಧ ಮಸೀದಿ ಮೇಲೆ‌ ಕಲ್ಲೆಸೆತ..!

- Advertisement -
- Advertisement -

ಮೈಸೂರು: ಕೃಷ್ಣರಾಜನಗರದ ಹಂಪಾಪುರದಲ್ಲಿ ದುಷ್ಕರ್ಮಿಗಳು ಮಸೀದಿ ಮೇಲೆ ಕಲ್ಲೆಸೆತ ನಡೆಸಿರುವ ಘಟನೆ ತಡವಾಗಿ ವರದಿಯಾಗಿದೆ.

ಫೆ.9 ರಂದು ಮಧ್ಯರಾತ್ರಿ ಸುಮಾರು 12ರ ವೇಳೆ ಜಾಮಿಯಾ ಮಸೀದಿಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

vtv vitla
vtv vitla

ಘಟನೆಯಲ್ಲಿ ಮಸೀದಿಯ ಕಿಟಕಿಯ ಗಾಜುಗಳು ಪುಡಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಬಗ್ಗೆ ಮಸೀದಿಯ ಇಮಾಮ್ ಮುಹಮ್ಮದ್ ಮುಝಾಮ್ಮಿಲ್ ಪ್ರತಿಕ್ರಿಯಿಸಿದ್ದು, ನಾನು ಮಸೀದಿಯಲ್ಲಿ ಮಲಗಿದ್ದ ವೇಳೆ ದುಷ್ಕರ್ಮಿಗಳ ತಂಡ ಕಲ್ಲು ತೂರಾಟ ನಡೆಸಿ ಮಸೀದಿಯ ಕಿಟಕಿಗಳ ಗಾಜುಗಳನ್ನು ಒಡೆದು ಹಾಕಿದ್ದಾರೆ ಎಂದು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!