- Advertisement -
- Advertisement -
ವಾಷಿಂಗ್ಟನ್: ವಿಶ್ವದ ಅತೀ ಜನಪ್ರಿಯ ಆನ್ಲೈನ್ ವೀಡಿಯೋ ವೇದಿಕೆ ಯು-ಟ್ಯೂಬ್ನ ಸಿಇಒ ಹುದ್ದೆಯಿಂದ ಸುಸಾನ್ ವೊಜಿಸಿಕಿ ಕೆಳಗಿಳಿದಿದ್ದು , ಯು-ಟ್ಯೂಬ್ನ ಮುಖ್ಯ ಉತ್ಪನ್ನಾಧಿಕಾರಿ ಭಾರತೀಯ ಮೂಲದ ನೀಲ್ ಮೋಹನ್ ಅವರಿಗೆ ಅಧಿಕಾರ
ಹಸ್ತಾಂತರಿಸಿದ್ದಾರೆ.
ಸುಸಾನ್ 9 ವರ್ಷಗಳ ಕಾಲ ಯು-ಟ್ಯೂನ್ ಸಿಇಒ ಹುದ್ದೆಯನ್ನು ಅಲಂಕರಿಸಿದ್ದರು. ಕುಟುಂಬ, ಆರೋಗ್ಯ ಹಾಗೂ ತಮ್ಮ ವೈಯಕ್ತಿಕ
ಯೋಜನೆಗಳಿಗೆ ಗಮನ ಹರಿಸಬೇಕಾಗಿರುವ ಹಿನ್ನೆಲೆಯಲ್ಲಿ ಈ ಹುದ್ದೆಯನ್ನು ತೆರವುಗೊಳಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಈ ಮೊದಲು ಗೂಗಲ್ನ ಆ್ಯಡ್ಪ್ರಾಡಕ್ಟ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸುಸಾನ್, 2014ರಲ್ಲಿ ಯು- ಟ್ಯೂಬ್ ಸಿಇಓ ಆಗಿ ಅಧಿಕಾರ ವಹಿಸಿಕೊಂಡಿದ್ದರು.
ಗೂಗಲ್ನ ಆರಂಭಿಕ ಉದ್ಯೋಗಿಗಳಲ್ಲೊಬ್ಬರಾದ ಇವರು, ಇದರ ಮಾತೃಸಂಸ್ಥೆ ಅಲ್ಫಾಬೆಟ್ ಇನ್ಕಾರ್ಪೊರೇಷನ್ನಲ್ಲಿ 25 ವರ್ಷ
ಕಾಲ ಸೇವೆ ಸಲ್ಲಿಸಿದ್ದರು.
- Advertisement -