Thursday, June 18, 2026
spot_imgspot_img
spot_imgspot_img

ಯೋಗಿ ಆದಿತ್ಯನಾಥ್‍ರಿಂದ ಕೊಡಗಿನ ಅಂಕಿತಾ ಸುರೇಶ್‍ಗೆ 10 ಲಕ್ಷ ರೂ. ಪುರಸ್ಕಾರ

- Advertisement -
- Advertisement -

ಮಡಿಕೇರಿ: ಟೋಕಿಯೋ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಮಹಿಳಾ ತಂಡದ ಅಪ್ರತಿಮ ಸಾಧನೆಗೆ ಕಾರಣಕರ್ತರಾದ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾದ ಕೊಡಗಿನ ಕಂಬಿಬಾಣೆಯ ಅಂಕಿತಾ ಸುರೇಶ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸನ್ಮಾನಿಸಿ, 10 ಲಕ್ಷ ರೂ. ಪುರಸ್ಕಾರ ನೀಡಿ ಗೌರವಿಸಿದ್ದಾರೆ.

ಅಂಕಿತಾ ಅವರಿಗೆ 10 ಲಕ್ಷ ರೂ.ಗಳ ಕೊಡುಗೆಯನ್ನು ಯೋಗಿ ಆದಿತ್ಯನಾಥ್ ನೀಡಿ ಪುರಸ್ಕರಿಸಿದ ಬಳಿಕ ಒಡಿಶಾದ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಕೂಡ ಅಂಕಿತಾ ಸುರೇಶ್ ಹಾಗೂ ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರ್ತಿಯರನ್ನು ರಾಜ್ಯದ ಪರವಾಗಿ ಸನ್ಮಾನಿಸಿ ಗೌರವಿಸಿದರು.

ಪ್ರೋತ್ಸಾಹ ಧನ ಕೊಡುಗೆ ಘೋಷಿಸಿದ ರಾಜ್ಯಪಾಲರು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾಗಿದ್ದ ಅಂಕಿತಾ ಸುರೇಶ್ ಸೇರಿದಂತೆ ಕರ್ನಾಟಕದ ನಾಲ್ವರು ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ತಲಾ ಒಂದು ಲಕ್ಷ ರೂ. ಪ್ರೋತ್ಸಾಹ ಧನ ಘೋಷಿಸಿದ್ದಾರೆ. ಜೊತೆಗೆ ನಾಲ್ವರಿಗೆ ಶೀಘ್ರದಲ್ಲೇ ರಾಜ ಭವನದಲ್ಲಿ ಗೌರವ ಸನ್ಮಾನ ನೀಡುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ.

- Advertisement -

Related news

error: Content is protected !!