Saturday, August 29, 2026
spot_imgspot_img
spot_imgspot_img

ರಿಲಯನ್ಸ್ ಜಿಯೊ ಕಂಪನಿಯ ರಾಜ್ಯ ಕಚೇರಿಯ ಸಹಾಯಕ ವ್ಯವಸ್ಥಾಪಕ ಆತ್ಮಹತ್ಯೆ

- Advertisement -
- Advertisement -

ಬೆಂಗಳೂರು: ರಿಲಯನ್ಸ್ ಜಿಯೊ ಕಂಪನಿಯ ರಾಜ್ಯ ಕಚೇರಿಯ ಸಹಾಯಕ ವ್ಯವಸ್ಥಾಪಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೀಣ್ಯ ಠಾಣೆ ವ್ಯಾಪ್ತಿಯ ವಸತಿಗೃಹವೊಂದರ ಕೊಠಡಿಯಲ್ಲಿ ಮೋಹನ್ ಕುಮಾರ್ (48) ಎಂಬುವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಾರ್ಚ್ 25ರಂದು ಮನೆ ಬಿಟ್ಟು ನಾಪತ್ತೆಯಾಗಿದ್ದ ಮೋಹನ್‌ಕುಮಾರ್ ನನ್ನನ್ನು ಹುಡುಕಬೇಡಿ ಎಂಬ ಸಂದೇಶವನ್ನು ಪತ್ನಿ ಹಾಗೂ ಇತರಿಗೆ ಕಳುಹಿಸಿದ್ದರು. ಗಾಬರಿಗೊಂಡ ಪತ್ನಿ, ಮೋಹನ್‌ಕುಮಾರ್ ನಾಪತ್ತೆ ಬಗ್ಗೆ ಆರ್‌ಎಂಸಿ ಯಾರ್ಡ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ತನಿಖೆ ನಡೆಸಿದಾಗ ಪೀಣ್ಯ ಠಾಣೆ ವ್ಯಾಪ್ತಿಯ ವಸತಿಗೃಹವೊಂದರ ಕೊಠಡಿಯಲ್ಲಿ ಮೋಹನ್‌ಕುಮಾರ್ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ. ಮೋಹನ್ ವಿಪರೀತ ಸಾಲವನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲ ಪಾವತಿ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಕೂಡ ವ್ಯಕ್ತವಾಗಿದೆ.

- Advertisement -

Related news

error: Content is protected !!