Sunday, June 14, 2026
spot_imgspot_img
spot_imgspot_img

ಲಯನ್ಸ್‌ ಕ್ಲಬ್‌ ಪುತ್ತೂರು ಇದರ ಆಶ್ರಯದಲ್ಲಿ ಸ್ಥಾಪಕ ದಿನಾಚರಣೆ, ಪ್ರಾಂತೀಯ ಅಧ್ಯಕ್ಷರ ಭೇಟಿ, ವಲಯ ಸಮಾವೇಶ ಕಾರ್ಯಕ್ರಮ

- Advertisement -
- Advertisement -

ಪುತ್ತೂರು: ಲಯನ್ಸ್‌ ಕ್ಲಬ್‌ ಪುತ್ತೂರು ಇದರ ಆಶ್ರಯದಲ್ಲಿ ಸ್ಥಾಪಕ ದಿನಾಚರಣೆ, ಪ್ರಾಂತೀಯ ಅಧ್ಯಕ್ಷರ ಭೇಟಿ, ವಲಯ ಸಮಾವೇಶ ದಿನಾಂಕ 24ರಂದು ಲಯನ್ಸ್‌ ಸೇವಾ ಮಂದಿರ ಪುತ್ತೂರಿನಲ್ಲಿ ನಡೆಯಿತು.

ಸ್ಥಾಪಕ ದಿನಾಚರಣೆಯನ್ನು ಲಯನ್ಸ್‌ ಜಿಲ್ಲೆ 317ಡಿ. ಯ ದ್ವಿತೀಯ ಉಪರಾಜ್ಯಪಾಲೆ B.M ಭಾರತಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮತ್ತು ಸಂಘದ ಸದಸ್ಯರಿಗೆ ನೆನಪಿನ ಕಾಣಿಕೆಯನ್ನು ನೀಡಿದರು.

ನಂತರ ಪ್ರಾಂತೀಯ ಅಧ್ಯಕ್ಷ ಸುದರ್ಶನ್‌ ಪಡಿಯಾರ್‌ರವರು ಕ್ಲಬ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿ ಬಂದಂತಹ ಪ್ರಾಂತ್ಯದ ಏಳು ಕ್ಲಬ್‌ಗಳನ್ನು ಅಭಿನಂದಿಸಿ ಈ ಪ್ರಾಂತ್ಯದಲ್ಲಿ ಪುತ್ತೂರು ಲಯನ್ಸ್‌ ಕ್ಲಬ್‌ 53ನೇ ವರ್ಷದ ಕ್ಲಬ್‌ ಆಗಿದ್ದು , ಈ ಕ್ಲಬ್‌ಗೆ ಪ್ರಸುತ್ತ ವರ್ಷ ಬಾಬ್ತು ರೂ. 3ಲಕ್ಷ ಮೌಲ್ಯದ ಟೈಲ್ಸ್‌ ಆಳವಡಿಸಿದೆ. ಇದರ ಸದುಪಯೋಗವನ್ನು ಪಡೆಯಬೇಕೆಂದು ಕೇಳಿಕೊಂಡರು.

ವಲಯಾಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್‌ ಅವರು ವಲಯದ ಸಮಾವೇಶವನ್ನು ನಡೆಸಿ ಎಲ್ಲಾ ಕ್ಲಬ್‌ಗೆ ಶುಭವನ್ನು ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಪುತ್ತೂರು ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ಕೇಶವ ನಾೖಕ್‌ ವಹಿಸಿದರು. ಕೋಶಾಧಿಕಾರಿ ಗಣೇಶ್‌. ಪಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಂತೀಯ ರಾಯಭಾರಿ ಅರವಿಂದ್‌ ಭಗವನ್‌ ರೈ, ಕಾರ್ಯದರ್ಶಿ ಗಣೇಶ್‌ ಶೆಟ್ಟಿ, ಹಿರಿಯ ಸದಸ್ಯರಾದ ಡಾ.ಎ.ಕೆ ರೈ , ಲ| ಕೃಷ್ಣ ಪ್ರಶಾಂತ್‌, ಲ| ವತ್ಸಲ, ಜಯ್‌ಶೀರ್‌ ಶೆಟ್ಟಿ ಮುಂತಾದವರು ಭಾಗವಹಿಸಿದರು.

ಪ್ರಾಂತ್ಯದ ಎಲ್ಲಾ ಕ್ಲಬ್‌ನ ಅಧ್ಯಕ್ಷರು, ಪದಾಧಿಕಾರಿಗಳ ಭಾಗವಹಿಸಿ ಈ ಕಾರ್ಯಕ್ರಮಕ್ಕೆ ಮೆರಗನ್ನು ನೀಡಿದರು.

- Advertisement -

Related news

error: Content is protected !!