Monday, July 20, 2026
spot_imgspot_img
spot_imgspot_img

ನ.23: ಲಯನ್ಸ್ ಜಿಲ್ಲೆ 317D ಇದರ ವತಿಯಿಂದ ಲಯನ್ಸ್ ಮಹಿಳಾ ಮತ್ತು ಲಿಯೋ ಕ್ರಿಕೆಟ್ ಪ್ರೀಮಿಯರ್ ಲೀಗ್ ಕ್ರೀಡಾಕೂಟ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಮತ್ತು ಕೊಡಗು ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆ 317D ಇದರ ವತಿಯಿಂದ ಪ್ರಥಮ ಬಾರಿಗೆ ಸ್ವತಂತ್ರವಾಗಿ ನಡೆಯಲಿರುವ ಲಯನ್ಸ್ ಮಹಿಳಾ ಮತ್ತು ಲಿಯೋ ಕ್ರಿಕೆಟ್ ಪ್ರೀಮಿಯರ್ ಲೀಗ್ ಕ್ರೀಡಾಕೂಟವು ಮಂಗಳೂರು ಪದುವಾ ಆಟದ ಮೈದಾನದಲ್ಲಿ ನ.23ನೇ ಆದಿತ್ಯವಾರದಂದು ನಡೆಯಲಿದೆ ಎಂದು ಕ್ರೀಡಾಕೂಟದ ಮುಖ್ಯ ಸಂಯೋಜಕಿ ಲಯನ್ ಆಶಾ ಸಿ. ಶೆಟ್ಟಿಯವರು ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕ್ರೀಡಾಕೂಟವನ್ನು ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಲಿ ಅರವಿಂದ ಶೆಣೈರವರು ಉದ್ಘಾಟಿಸಲಿದ್ದು, ವಿವಿಧ ಜಿಲ್ಲೆಗಳಿಂದ ದಾಖಲೆಯ 16 ತಂಡಗಳಲ್ಲಿ ಸುಮಾರು 250 ಕ್ರೀಡಾಳುಗಳು ಭಾಗವಹಿಸಲಿದ್ದು, ಸುಮಾರು 600 ಲಯನ್ಸ್ ಸದಸ್ಯರು ಭಾಗವಹಿಸಲಿದ್ದಾರೆ.

ಸಂಜೆ ಜರಗಲಿರುವ ಸಮಾರೋಪ ಸಮಾರಂಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಳು ಮತ್ತು ಪ್ರಖ್ಯಾತ ಕ್ರಿಕೇಟ್ ತರಬೇತುದಾರರಾದ ಶಾಲಿನಿ ರಾಜೇಶ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿರುತ್ತಾರೆ. ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ 5 ಮಂದಿ ಮಹಿಳಾ ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಲ. ಆಶಾ ಸಿ. ಶೆಟ್ಟಿಯವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್. ಜಿಲ್ಲಾ ಪಂದ್ಯಾವಳಿಗಳ ಮುಖ್ಯ ಸಂಯೋಜಕರಾದ ಮೋಹನ್ ಕೊಪ್ಪಲ್ ಕದ್ರಿ, ಜಿಲ್ಲಾ ಲಿಯೋ ಅಧ್ಯಕ್ಷೆ ಲಿಯೋ ಶ್ರೀನಿಧಿ ಶೆಟ್ಟಿ, ಕ್ರಿಕೆಟ್ ಪ್ರೀಮಿಯರ್ ಲೀಗ್‌ನ ಮುಖ್ಯ ಸಲಹೆಗಾರರಾದ ಶ್ರೀಧರ್ ರಾಜ್ ಶೆಟ್ಟಿ, ತುರ್ಲಾ ರೈ ಮತ್ತು ಎ. ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.

- Advertisement -

Related news

error: Content is protected !!