Sunday, August 30, 2026
spot_imgspot_img
spot_imgspot_img

ಲ್ಯಾಪ್ ಟಾಪ್ ಸ್ಟೋಟಗೊಂಡು ಯುವತಿ ಗಂಭೀರ

- Advertisement -
- Advertisement -

ವಿಜಯವಾಡ: ಮನೆಯಲ್ಲಿ ವರ್ಕ್ ಫ್ರಮ್ ಹೋಮ್ ನಿರ್ವಹಿಸುತ್ತಿದ್ದ ವೇಳೆ ಲ್ಯಾಪ್ ಟಾಪ್ ಸ್ಫೋಟಗೊಂಡು ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ವೈಎಸ್ಆರ್ ಜಿಲ್ಲೆಯ ಬಿ.ಕೋಡೂರು ಮಂಡಲದ ಮೇಕವಾರಿಪಲ್ಲಿ ಗ್ರಾಮದಲ್ಲಿ ನಡೆದಿದೆ. ಸುಮತಿ ಗಂಭೀರವಾಗಿ ಗಾಯಗೊಂಡ ಯುವತಿಯಾಗಿದ್ದಾರೆ.

ಕೋವಿಡ್ ಯಿಂದಾಗಿ ಬಹುತೇಕ ಕಂಪನಿಗಳು ವರ್ಕ್ ಫ್ರಮ್ ಹೋಮ್ ಅವಕಾಶ ನೀಡಿವೆ. ಹೀಗಾಗಿ ಮನೆಯಲ್ಲೇ ಲ್ಯಾಪ್ ಟಾಪ್ ಮೂಲಕ ಕೆಲಸ ಮಾಡುತ್ತಿದ್ದ ಯುವತಿ ಅದು ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಂಧ್ರ ಪ್ರದೇಶದಲ್ಲಿರುವ ಸಾಫ್ಟ್ ವೇರ್ ಕಂಪನಿವೊಂದರಲ್ಲಿ ಉದ್ಯೋಗದಲ್ಲಿದ್ದ ಸುಮತಿ ಇಂದು ಬೆಳಗ್ಗೆ ಲ್ಯಾಪ್ ಟಾಪ್ ಚಾರ್ಜ್ ಮಾಡಲು ಇಟ್ಟು ಅದರಲ್ಲಿ ಕೆಲಸ ಮಾಡುತ್ತಿದ್ದ ರು.

ತಾನು ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಬ್ಯಾಟರಿ ಸ್ಫೋಟಗೊಂಡಿದೆ. ಯುವತಿ ಬೀಗ ಹಾಕಿಕೊಂಡಿದ್ದ ಕಾರಣ, ಆಕೆಯ ರಕ್ಷಣೆ ಮಾಡುವಲ್ಲಿ ಸ್ವಲ್ಪ ತಡವಾಗಿದೆ. ರೂಂನಲ್ಲಿ ಬೆಂಕಿ ಹೊತ್ತಿಕೊಂಡಿದೆ.ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸುಮತಿ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

vtv vitla
- Advertisement -

Related news

error: Content is protected !!