
ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ (ರಿ) ಶಾಂತಿನಗರ ವಿಟ್ಲ ದ ಕ ಇದರ ಆಶ್ರಯದಲ್ಲಿ ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ವಿಟ್ಲ, ಆನಂದಾಶ್ರಮ ಸೇವಾ ಟ್ರಸ್ಟ್ (ರಿ) ಪುತ್ತೂರು ಹಾಗೂ ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇವುಗಳ ಸಹಕಾರದೊಂದಿಗೆ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇದರ ತಜ್ಞ ವೈದ್ಯರಿಂದ ಕಣ್ಣಿನ ಚಿಕಿತ್ಸಾ ಶಿಬಿರ ಅಕ್ಷಯ ಸಮುದಾಯ ಭವನದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ ಮೋನಪ್ಪ ಗೌಡ ಶಿವಾಜಿನಗರ ಇವರು ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಆನಂದಾಶ್ರಮ ಸೇವ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷೆ ಡಾ. ಗೌರಿ ಪೈ ಮತ್ತು ಅತಿಥಿಗಳು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ವೆನ್ಲಾಕ್ ಆಸ್ಪತ್ರೆಯ ವೈದ್ಯರಾದ ಡಾ. ಅನಿಲ್ ರಾಮಾನುಜಮ್ ಡಾ. ಕೃತಿಕಾ, ಡಾ ರಿಬೇಕಾ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಶ್ರೀನಿಧಿ, ಸಮುದಾಯ ಆರೋಗ್ಯ ಕೇಂದ್ರ ಉಪ್ಪಿನಂಗಡಿಯ ನೇತ್ರಾಧಿಕಾರಿ ಶಾಂತರಾಜ್ ಎಸ್, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ನಾಯಕ್, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ, ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಮೋಹನ್ ಕಾಯರ್ಮಾರ್, ಮಹಿಳಾ ಘಟಕದ ಅಧ್ಯಕ್ಷೆ ಜಲಲಾಕ್ಷಿ ಪೊನ್ನೆತ್ತಡಿ, ಯುವ ವೇದಿಕೆ ಅಧ್ಯಕ್ಷ ದಿನೇಶ್ ಮಾಡ್ತೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಿಳಾ ಘಟಕದ ಅಧ್ಯಕ್ಷೆ ಜಲಜಾಕ್ಷಿ ಪೊನ್ನೆತ್ತಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ವಿಶ್ವನಾಥ ವರಪ್ಪಾದೆ ಧನ್ಯವಾದ ಸಲ್ಲಿಸಿದರು. ಕಣ್ಣಿನ ಚಿಕಿತ್ಸಾ ಶಿಬಿರದಲ್ಲಿ ೩೦೬ ಜನರು ಕಣ್ಣಿನ ಪರೀಕ್ಇಸಿ ೧೭೩ ಜನರಿಗೆ ಆನಾಂದ್ರಶಮ ಸೇವಾ ಟ್ರಸ್ಟ್ (ರಿ) ಪುತ್ತೂರು ವತಿಯಿಂದ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಯಿತು. ೧೩ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ನಿರ್ದೇಶಿಲಾಗಿದೆ.


