Sunday, August 9, 2026
spot_imgspot_img
spot_imgspot_img

ವಿಟ್ಲ: ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾಲಕ ದಿವಾಕರ ದಾಸ್ ನೇರ್ಲಾಜೆಯವರಿಂದ ಉಚಿತ ಪುಸ್ತಕ ವಿತರಣೆ

- Advertisement -
- Advertisement -

ವಿಟ್ಲ: ಚಂದಳಿಕೆ ಹಿ.ಪ್ರಾ ಶಾಲಾ ವಿದ್ಯಾರ್ಥಿಗಳಿಗೆ ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ, ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಮಾಲಕ ದಿವಾಕರ ದಾಸ್ ನೇರ್ಲಾಜೆಯವರು ಉಚಿತ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿದರು.

ಶಾಲೆಯ 151 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಎಲ್.ಕೆ.ಜಿ, ಯು.ಕೆ.ಜಿ ಮಕ್ಕಳಿಗೆ ಓದುವ ಪುಸ್ತಕವನ್ನು ಉಚಿತವಾಗಿ ನೀಡಿದರು. ವಿಟ್ಲ ಪಟ್ಟಣ ಪಂಚಾಯತ್‌ ಸದಸ್ಯರಾದ ರವಿಪ್ರಕಾಶ್ ವಿಟ್ಲ, ರಕ್ಷಿತಾ ಸನತ್ ನಿತ್ಯ, ಶಾಲಾ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಭವಾನಿ ರೈ ಕೊಲ್ಯ, ಸದಸ್ಯರಾದ ದೇಜಪ್ಪ ಪೂಜಾರಿ ನಿತ್ಯ, ಸಂಜೀವ ಪೂಜಾರಿ ವಿಟ್ಲ ಥೆರೇಸಾ ಡಿಸೋಜಾ, ಶ್ರೀನಿವಾಸ್ ಚಂದಳಿಕೆ, ಜಾಯ್ ಪ್ರವೀಣ್ ಬೂಡು, ನಾರಾಯಣ್ ಪೂಜಾರಿ ಚಿಪ್ಪುಡಿಯಡ್ಕ, ಅನಿಲ್ ವಡಗೇರಿ, ಸುಮಾ, ದಿವಾಕರ್ ಶೆಟ್ಟಿ ಅಭೀರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ವಿಶ್ವನಾಥ ಗೌಡ ಕುಳಾಲು ಸ್ವಾಗತಿಸಿದರು. ಸಹಶಿಕ್ಷಕ ವೆಂಕಟೇಶ ಪಿ. ವಂದಿಸಿ, ಪ್ರಸನ್ನ ಪಿ. ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!