Thursday, June 18, 2026
spot_imgspot_img
spot_imgspot_img

ವಿಟ್ಲ: ಗಾಂಜಾ ಮತ್ತಲ್ಲಿ ಹಾಡು ಹಗಲೇ ಸಾರ್ವಜನಿಕವಾಗಿ ತಲವಾರು ತೋರಿಸಿ ಬೆದರಿಕೆ; ತಲವಾರು ಸಹಿತ ಆರೋಪಿಯನ್ನು ವಶಕ್ಕೆ ಪಡೆದ ವಿಟ್ಲ ಪೊಲೀಸರು

- Advertisement -
- Advertisement -

ವಿಟ್ಲ: ಹಾಡು ಹಗಲೇ ವ್ಯಕ್ತಿಯೋರ್ವರಿಗೆ ತಲವಾರು ತೋರಿಸಿ ಬೆದರಿಕೆ ಹಾಕಿದ ಘಟನೆ ಉರಿಮಜಲು ಜಂಕ್ಷನ್ ನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ರವುಫ್ ಉರಿಮಜಲುರವರ ಪುತ್ರ (ಅಪ್ಪಿ) ಆಫೀಲ್ ಎಂಬಾತ ಬಂಧಿತ ಆರೋಪಿ.

ಉರಿಮಜಲು ಜಂಕ್ಷನ್ ನಲ್ಲಿ ಶರೀಫ್ ಎಂಬವರಿಗೆ ಆಫೀಲ್ ಎಂಬಾತ ತಲವಾರು ತೋರಿಸಿ ಬೆದರಿಕೆ ಹಾಕಿದ್ದಾನೆ.

ಆರೋಪಿ ಆಫೀಲ್ ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ತಲವಾರು ಜಲಪಿಸಿದ್ದಾನೆ. ಹಾಡು ಹಗಲಲ್ಲೇ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಆರೋಪಿ ಆಫೀಲ್ ಅಕ್ರಮ ಗೊ ಸಾಗಾಟದಲ್ಲಿ ಸಿಕ್ಕಿ ಬಿದ್ದಿದ್ದನು. ಇಂದು ಆಫೀಲ್ ತಲವಾರು ಹಿಡಿದು ಶರೀಫ್ ನನ್ನು ಕಾದು ಕುಳಿತಿದ್ದನು.

ಶರೀಫ್ ನೀಡಿದ ದೂರಿನಂತೆ ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಬಾರಿ ಗಾತ್ರದ ತಲವಾರು ವಶಕ್ಕೆ ಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಅಬಕಾರಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ

- Advertisement -

Related news

error: Content is protected !!