Tuesday, April 30, 2024
spot_imgspot_img
spot_imgspot_img

ವಿಟ್ಲ: ತತ್ವ ಸ್ಕೂಲ್ ಆಫ್‌ ಆರ್ಟ್‌’ನ ಪ್ರಾಥಮಿಕ ಕಲಾ ಶಿಬಿರದ ಉದ್ಘಾಟನೆ

- Advertisement -G L Acharya panikkar
- Advertisement -

ವಿಟ್ಲ: ತತ್ವ ಸ್ಕೂಲ್ ಆಫ್‌ ಆರ್ಟ್‌ ಹಮ್ಮಿಕೊಂಡಿರುವ ಪ್ರಾಥಮಿಕ ಕಲಾ ಶಿಬಿರ ಇಂದು ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಬಸವನಗುಡಿ, ವಿಟ್ಲ ಇಲ್ಲಿ ಉದ್ಘಾಟನೆಗೊಂಡಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ನಿದೇರ್ಶಕ ಮೋನಪ್ಪ ಶೆಟ್ಟಿ, ಜೇಸಿ ಸಂಸ್ಥೆಯ ಕಾರ್ಯದರ್ಶಿ ಮೋಹನ ಎ ನೆರವೇರಿಸಿದರು.

ಈ ವೇಳೆ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ರಾಧಾಕೃಷ್ಣ ಎ, ಉಪಪ್ರಾಂಶುಪಾಲೆ ಜ್ಯೋತಿ ಶೆಣೈ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ಚಿತ್ರಕಲಾ ಶಿಕ್ಷಕ ಕಾರ್ತಿಕ್ ಕುಮಾರ್‍, ತತ್ವ ಸ್ಕೂಲ್ ಆಫ್ ಆರ್ಟ್ ವಿಟ್ಲ ಇಲ್ಲಿನ ಚಿತ್ರಕಲಾ ಶಿಕ್ಷಕಿ ಜಯಲಕ್ಷ್ಮೀ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಯುವ ಕಲಾವಿದ ಚೇತನ್ ವಿಟ್ಲ ನಿರೂಪಿಸಿ, ತತ್ವ ಸ್ಕೂಲ್ ಆಫ್ ಆರ್ಟ್‌‌ನ ನಿರ್ದೇಶಕ ಟೀಲಾಕ್ಷ ವಿಟ್ಲ ಸ್ವಾಗತಿಸಿ, ವಿದ್ಯಾರ್ಥಿಗಳಾದ ಅನಿಕಾ ಹೆಚ್ ಭಟ್, ಶ್ರೀಮಾ ಭಟ್ ಎಂ.ಆರ್‍ ಪ್ರಾರ್ಥಿಸಿ, ತತ್ವ ಸ್ಕೂಲ್ ಆಫ್ ಆರ್ಟ್‌‌ನ ಪ್ರಾಂಶುಪಾಲೆ ರಶ್ಮಿ ಶೆಟ್ಟಿ ವಂದಿಸಿದರು.

೬ ದಿನಗಳ ಕಾಲ ನಡೆಯಲಿರುವ ಈ ಕಲಾ ಶಿಬಿರದಲ್ಲಿ ವಿವಿಧ ಪ್ರಕಾರದ ಕಲೆಯನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ಗ್ಲಾಸ್ ಪೈಂಟಿಂಗ್, ಮಣ್ಣಿನ ಮಡಕೆ ಮೇಲೆ ಚಿತ್ರಕಲೆ, ಕ್ಯಾನ್ವಾಸ್ ಚಿತ್ರಕಲೆ, ಮಣ್ಣಿನ ಮಾದರಿ ತಯಾರಿ, ಕಲ್ಲಿನಲ್ಲಿ ಚಿತ್ರಕಲೆ, ಕ್ರಾಫ್ಟ್, ಮುಖವಾಡ ರಚನೆ, ಸೃಜನಾತ್ಮಕ ಚಿತ್ರಕಲೆಯ ತರಬೇತಿ ಹಮ್ಮಿಕೊಳ್ಳಲಾಗಿದೆ.

- Advertisement -

Related news

error: Content is protected !!