Monday, June 15, 2026
spot_imgspot_img
spot_imgspot_img

ವಿಟ್ಲ: ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿದ ಎನ್ ಸಿಸಿ ಕೆಡೆಟ್ ವಿದ್ಯಾರ್ಥಿನಿ

- Advertisement -
- Advertisement -

ವಿಟ್ಲ: ಎನ್ ಸಿಸಿ ಕೆಡೆಟ್ ವಿದ್ಯಾರ್ಥಿನಿ ತನುಷಾ ತನ್ನ ಮನೆಯ ಪಕ್ಕದಲ್ಲಿ ಕಸ ಕಡ್ಡಿಗಳಿಂದ ತುಂಬಿ ಕೊಚ್ಚೆಯಂತ್ತಿದ್ದ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾಳೆ.

ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈಕೆ ವಿವೇಕಾನಂದ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ವಿಟ್ಲ ಮುಡ್ನೂರು ಗ್ರಾಮದ ಚಂದ್ರಶೇಖರ ಗೌಡ ಹಾಗೂ ಹರಿಣಾಕ್ಷಿ ದಂಪತಿಯ ಪುತ್ರಿಯಾಗಿದ್ದಾಳೆ. ವಿಟ್ಲದ ಈ ವಿದ್ಯಾರ್ಥಿನಿಯ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ.

- Advertisement -

Related news

error: Content is protected !!