
ವಿಟ್ಲ: ಲಯನ್ಸ್ ಜಿಲ್ಲಾ317ಡಿ ಪ್ರಾಂತೀಯ 7ರ ಪ್ರಾಂತೀಯ ಸಮ್ಮೇಳನದ ಪೂರ್ವಭಾವಿ ಸಭೆಯು ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಲಯನ್ ಎಮ್.ಬಿ ಸದಾಶಿವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಂತೀಯ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದರು. ಈ ಸಮ್ಮೇಳನವು ನವೆಂಬರ್ 20ರಂದು ಪುತ್ತೂರು ಲಯನ್ಸ್ ಕ್ಲಬ್ ಅತಿಥ್ಯದಲ್ಲಿ ಪ್ರಾಂತೀಯ ಎಲ್ಲಾ ಕ್ಲಬ್’ಗಳ ಸಹಕಾರದೊಂದಿಗೆ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಅಕ್ಟೋಬರ್ 30ರಂದು ಪ್ರಾಂತೀಯ 7-8ರ ಲಯನ್ಸ್ ಸದಸ್ಯರಿಗೆ ಹಾಗೂ ಅವರ ಮನೆಯವರಿಗೆ ಒಂದು ದಿನದ ಕ್ರೀಡಾಕೂಟವು ವಿಟ್ಲದಲ್ಲಿ ನಡೆಯಲಿದೆ.


ಈ ಸಮ್ಮೇಳನ ಸಮಿತಿಯ ಅಧ್ಯಕ್ಷರಾಗಿ ಲಯನ್ ಕೃಷ್ಣ ಪ್ರಶಾಂತ್, ಕಾರ್ಯದರ್ಶಿ ಡಾ| ಸತೀಶ್ ರಾವ್, ಜೊತೆ ಕಾರ್ಯದರ್ಶಿ ರಝಾಕ್ ಎಂ.ಜಿ, ಕೋಶಾಧಿಕಾರಿ ಒ.ಎ ಕೃಷ್ಣ, ಜೊತೆ ಕೋಶಾಧಿಕಾರಿ ಶ್ವೇತಾ ಆರ್.ಕೆ ಆಯ್ಕೆಯಾದರು. ಈ ಸಭೆಯಲ್ಲಿ ಪ್ರಾಂತೀಯ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕೃಷ್ಣ ಪ್ರಶಾಂತ್, ಗಣೇಶ್ ಶೆಟ್ಟಿ, ಸತೀಶ್ ಕುಮಾರ್ ಆಳ್ವ, ವಲಯ ಅಧ್ಯಕ್ಷ ರಮೇಶ್, ಪ್ರಾಂತೀಯ ಸಲಹೆಗಾರ ಅರವಿಂದ್ ಭಗವಾನ್ ಹಾಗೂ ಪ್ರಾಂತೀಯ 7ರ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಸವಿತಿಗಳನ್ನು ರಚಿಸಲಾಯಿತು. ಕೊನೆಯಲ್ಲಿ ವಿಟ್ಲ ಲಯನ್ಸ್ ಅಧ್ಯಕ್ಷ ಸಂದೇಶ್ ಶೆಟ್ಟಿ ಧನ್ಯವಾದ ಅರ್ಪಿಸಿದರು.










