

ವಿಟ್ಲ: ಕ್ಷುಲ್ಲಕ ಕಾರಣಕ್ಕೆ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆ ವಿಟ್ಲದ ಒಕ್ಕೆತ್ತೂರು ಎಂಬಲ್ಲಿ ನಡೆದಿದೆ. ವಿಶ್ವ ಹಿಂದು ಪರಿಷತ್ ವಿಟ್ಲ ಪ್ರಖಂಡದ ಉಪಾಧ್ಯಕ್ಷ ಜಯ ಕೊಟ್ಟಾರಿ ಮೇಲೆ ಓಕ್ಕೆತ್ತೂರು ಮುಸ್ಲಿಂ ತಂಡದಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.
ನಿನ್ನೆ ತಡರಾತ್ರಿ ಒಕ್ಕೆತ್ತೂರಿನಲ್ಲಿ ವಿಶ್ವ ಹಿಂದು ಪರಿಷತ್ ವಿಟ್ಲ ಪ್ರಖಂಡದ ಉಪಾಧ್ಯಕ್ಷ ಜಯ ಕೊಟ್ಟಾರಿ ಅವರು ಚಲಿಸುತ್ತಿದ್ದ ರಿಟ್ಝ್ ಕಾರು ಹಾಗೂ ಆಟೋ ರಿಕ್ಷಾದ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಅಲ್ಲಿದ್ದ ಯುವಕರ ತಂಡವು ಜಯ ಕೊಟ್ಟಾರಿ ಅವರ ಮೇಲೆ ಹಲ್ಲೆಗೆ ಯತ್ನ ನಡೆಸಿದೆ.

ರಾತ್ರಿ ಘಟನೆ ನಡೆದ ತಕ್ಷಣವೇ ಜಯ ಕೊಟ್ಟಾರಿಯವರವನ್ನು ಹಿಂ.ಜಾ.ವೇ.ವಿಟ್ಲ ತಾಲೂಕಿನ ಪ್ರಮುಖರ ಸೂಚನೆಯಂತೆ ಹಿಂ.ಜಾ.ವೇ.ಕಾರ್ಯದರ್ಶಿ ಚೇತನ್ ಕಡಂಬು ಮತ್ತಿತರರು ಆಸ್ಪತ್ರೆಗೆ ದಾಖಲು ಮಾಡಿಸಿ ಅವರ ಜತೆಗೆ ಇದ್ದುಕೊಂಡು ಅವರಿಗೆ ಧೈರ್ಯವನ್ನು ತುಂಬಿ ಪೊಲೀಸ್ ಇಲಾಖೆ ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ. ಹಾಗೂ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ತೀವ್ರವಾಗಿ ಖಂಡಿಸುತ್ತದೆ.
ನಿನ್ನೆ ವಿ.ಹಿಂ.ಪ. ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದನ್ನು ಹಿಂದೂ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷರಾದ ಗಣೇಶ್ ಕುಲಾಲ್ ಕೆದಿಲ, ತಾಲೂಕು ಉಪಾಧ್ಯಕ್ಷರಾದ ರಾಜೇಶ್ ಕರೋಪಾಡಿ, ಕಾರ್ಯದರ್ಶಿಗಳಾದ ಚೇತನ್ ಕಡಂಬು, ಹರ್ಷ ವಿಟ್ಲ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.



