Sunday, August 2, 2026
spot_imgspot_img
spot_imgspot_img

ವಿಟ್ಲ(ಅ.8): ಆದರ್ಶ ವಿವಿದೋದ್ದೇಶ ಸಹಕಾರ ಸಂಘ ವಿಟ್ಲ ಶಾಖೆಯ ಸ್ಥಳಾಂತರ ಸಮಾರಂಭ

- Advertisement -
- Advertisement -

ವಿಟ್ಲ: ಆದರ್ಶ ವಿವಿದೋದ್ದೇಶ ಸಹಕಾರ ಸಂಘ ವಿಟ್ಲ ಶಾಖೆಯ ಸ್ಥಾಳಾಂತರ ಸಮಾರಂಭವು ವಿಟ್ಲ-ಮಂಗಳೂರು ರಸ್ತೆಯ ಹರಿಹರ ಕಾಂಪ್ಲೆಕ್ಸ್ ನಲ್ಲಿ ಅ. 8ರಂದು ಬೆಳಿಗ್ಗೆ 9.45ಕ್ಕೆ ನಡೆಯಲಿದೆ.

ಈ ಸಮಾರಂಭದಲ್ಲಿ ಒಡಿಯೂರು ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಸಂಜೀವ ಮಠಂದೂರು ಸ್ಥಾಳಾಂತರಗೊಂಡ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ವಿಧಾನಸಭಾ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಟ್ಲ ಶೋಕಮಾತ ದೇವಾಲಯದ ಧರ್ಮಗುರು ಐವನ್ ಮೈಕಲ್ ರೊಡ್ರಿಗಸ್, ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಎಸ್. ಇಬ್ರಾಹಿಂ, ಹರಿಹರ ಕಾಂಪ್ಲೆಕ್ಸ್ ನ ಮಾಲಕರು ಸುರೇಶ್ ಬನಾರಿ, ಉದ್ಯಮಿ ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ ಭಾಗವಹಿಸಲಿದ್ದಾರೆ.

ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿ ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

driving
- Advertisement -

Related news

error: Content is protected !!