Saturday, July 25, 2026
spot_imgspot_img
spot_imgspot_img

ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಛದ್ಮವೇಷ ಸ್ಪರ್ಧೆ; ಗಮನಸೆಳೆದ ಕಾಂತರ ಸಿನೆಮಾದ ದೈವದ ವೇಷಧಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್

- Advertisement -
- Advertisement -

ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ತಾರೀಕು 07. 12. 2022 ರಂದು ಶಾಲಾ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಯಿತು. ಕೆ.ಜಿ ಇಂದ 10ನೇ ತರಗತಿ ವರೆಗೆ ಸುಮಾರು 330 ವಿದ್ಯಾರ್ಥಿಗಳು ಮುತುವರ್ಜಿಯಿಂದ ವಿವಿಧ ವೇಷದಾರಿಗಳಾಗಿ ಎಲ್ಲರನ್ನೂ ರಂಜಿಸಿದರು. ಸ್ಪರ್ಧಾಳುಗಳ ಪೋಷಕರೂ ಈ ಕಾರ್ಯಕ್ರಮದಲ್ಲಿ ಬಹಳ ಉತ್ಸುಕತೆಯಿಂದ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ಹಸನ್ ವಿಟ್ಲ, ಆಡಳಿತಾಧಿಕಾರಿ ರಾಧಾಕೃಷ್ಣ ಎ, ಪ್ರಾಂಶುಪಾಲರಾದ ಜಯರಾಮ್ ರೈ, ಉಪ ಪ್ರಾಂಶುಪಾಲೆಯರಾದ ಜ್ಯೋತಿ ಶೆಣೈ ಹಾಗೂ ಹೇಮಲತಾ, ಶಿಕ್ಷಕ – ಶಿಕ್ಷಕೇತರ ವೃಂದದವರು ಈ ಕಾರ್ಯಕ್ರಮಕ್ಕೆ ತುಂಬು ಹೃದಯದ ಸಹಕಾರ ನೀಡಿ ಪಾಲ್ಗೊಂಡರು. ಸಹ ಶಿಕ್ಷಕಿಯರಾದ ಶ್ರೀಮತಿ ಶೀಲಾ ಮತ್ತು ಶ್ರೀಮತಿ ತುಳಸಿ ಕಾರ್ಯಕ್ರಮ ಸಂಯೋಜಿಸಿದರು.

ಗಮನಸೆಳೆದ ಕಾಂತರ ಸಿನೆಮಾದ ದೈವದ ವೇಷಧಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ.

ಬಂದಂತಹ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಯಿತು.

- Advertisement -

Related news

error: Content is protected !!