- Advertisement -
- Advertisement -
ವೀರಕಂಭ: ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಉಪಕೇಂದ್ರ ವೀರಕಂಭ, ಗ್ರಾಮ ಪಂಚಾಯತ್ ವೀರಕಂಭ ಸಹಕಾರದೊಂದಿಗೆ ಉಚಿತ ಕೋವಿಡ್ ಲಸಿಕಾ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ, ವೀರಕಂಭ ಇಲ್ಲಿ ನಡೆಯಿತು.
ಇದನ್ನೂ ಓದಿ: ಪುತ್ತೂರು: ಕೇಶವ ನಾಯ್ಕ್ ಎಂಬವರ ಮೃತದೇಹ ಮಹಾಲಿಂಗೇಶ್ವರ ದೇವಳದಲ್ಲಿನ ಪಂಚಾಕ್ಷರಿ ಮಂಟಪದಲ್ಲಿ ಪತ್ತೆ!
ವೀರಕಂಭ ಗ್ರಾಮದ ಪಂಚಾಯತ್ ಅಧ್ಯಕ್ಷರಾದ ಶ್ರೀ ದಿನೇಶರವರು ಗ್ರಾಮ ವ್ಯಾಪ್ತಿಯ ಜನರ ಆರೋಗ್ಯದ ರಕ್ಷಣೆಗೆ ಶ್ರಮಿಸುತ್ತಿರುವ ಗ್ರಾಮದ ಆರೋಗ್ಯ ಸಹಾಯಕಿಯರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ರಕ್ಷಾಬಂಧನದ ನಿಮಿತ್ತ ರಕ್ಷೆಯನ್ನು ಕಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಜನಾರ್ಧನ ಗೋಳಿಮಾರು, ಜಯಪ್ರಸಾದ್ ಕೆಲಿಂಜ, ಮೀನಾಕ್ಷಿ ಸುನಿಲ್, ಉದ್ಯಮಿ ಸಂದೀಪ್ ಕುಮಾರ್ ಶೆಟ್ಟಿ, ವೀರಕಂಭ ಬಿಲ್ಲವ ಸಂಘದ ಅಧ್ಯಕ್ಷ ಜಯಪ್ರಕಾಶ ತೆಕ್ಕಿಪಾಪು, ಮಜಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಮೈರ ಮೊದಲಾದವರು ಉಪಸ್ಥಿತರಿದ್ದರು.
- Advertisement -