Monday, August 31, 2026
spot_imgspot_img
spot_imgspot_img

ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಗ್ಯಾರೇಜ್; 3 ಬೈಕ್, 2 ಕಾರುಗಳು ಬೆಂಕಿಗಾಹುತಿ..!

- Advertisement -
- Advertisement -

ಬೆಂಗಳೂರು: ಶಾರ್ಟ್ ಸರ್ಕ್ಯೂಟ್‌’ನಿಂದಾಗಿ ಕಾರು ಗ್ಯಾರೇಜ್’ವೊಂದು ಹೊತ್ತಿ ಉರಿದ ಘಟನೆ ಬೆಂಗಳೂರಿನ ವಿವೇಕನಗರದ ವನ್ನರ್ ಪೇಟ್’ನಲ್ಲಿ ತಡರಾತ್ರಿ ನಡೆದಿದೆ.

ನಾಸೀರ್ ಅವರ ಮಾಲೀಕತ್ವದ ಗ್ಯಾರೇಜ್ ಇದಾಗಿದ್ದು, ತಡರಾತ್ರಿ 2 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಗ್ಯಾರೇಜ್‌ನಲ್ಲಿರುವ 3 ಬೈಕ್, 5 ಕಾರು ಬೆಂಕಿಗಾಹುತಿಯಾಗಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಗ್ಯಾರೇಜ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸುವ ವೇಳೆ ಗ್ಯಾರೇಜ್’ನಲ್ಲಿಟ್ಟಿದ್ದ 2 ಸಿಲಿಂಡರ್ ಸ್ಪೋಟವಾಗಿದೆ. ಸ್ಪೋಟದ ತೀವ್ರತೆಗೆ ಕಾರು ಗ್ಯಾರೇಜ್ ಸಂಪೂರ್ಣ ಭಸ್ಮವಾಗಿದೆ. ಸುಮಾರು 500 ಮೀಟರ್ ನಷ್ಟು ದೂರ ಸಿಲಿಂಡರ್ ಬ್ಲಾಸ್ಟ್ ಆದ ಶಬ್ಧ ಕೇಳಿಬಂದಿದೆ. ಸ್ಫೋಟದ ತೀವ್ರತೆಗೆ ಮಧ್ಯರಾತ್ರಿ ಏರಿಯಾ ಜನ ಗಾಬರಿಗೊಂಡಿದ್ದಾರೆ. ಗ್ಯಾರೇಜ್ ಪಕ್ಕದಲ್ಲೇ ದೇವಸ್ಥಾನ ಹಾಗೂ ಮನೆಗಳು ಇದ್ದು, ಸ್ವಲ್ಪ ಪ್ರಮಾಣದ ಹಾನಿ ಸಂಭವಿಸಿದೆ ಎನ್ನಲಾಗುತ್ತಿದೆ.

3 ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸತತ ಒಂದುವರೆ ಗಂಟೆಗಳ ಕಾರ್ಯಾಚರಣೆ ಬಳಿಕ 3 ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.ಯಾವುದೇ ಪ್ರಾಣ ಹಾನಿಯಾಗಿಲ್ಲ.

- Advertisement -

Related news

error: Content is protected !!