- Advertisement -
- Advertisement -


ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೊಡಿಯಲ್ಲಿನ LKG ತರಗತಿಯನ್ನು ಪಾಟ್ರಕೊಡಿಯ ಹಿರಿಯ ದಾನಿ, ಮಾಜಿ ಕೆದಿಲ ಪಂಚಾಯತ್ ಸದಸ್ಯ ರಾಬರ್ಟ್ ಲಸ್ರದೊರವರು ಉದ್ಘಾಟಿಸಿದರು.


ಈ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶ್ರಪ್ ತಾರಿಪಡ್ಪು, ಪಂಚಾಯತ್ ಉಪಾಧ್ಯಕ್ಷ ಉಮೇಶ್ ಮುರುವ, ಸದಸ್ಯ ಹಬೀಬ್ ಮುಹ್ಸಿನ್, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಶರೀಫ್, ಜಬ್ಬರ್.

ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಬದ್ರುನ್ನಿಸ ಪಾಟ್ರಕೊಡಿ, ಸದಸ್ಯ ಹರೀಶ್ ಕುದುಂಬ್ಲಾಡಿ ಹಾಗೂ ಶಾಲಾ ಶಿಕ್ಷಕರು, ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದರು. ಶಾಲಾ ಮುಖ್ಯ ಗುರುಗಳಾದ ಶರಣಪ್ಪ ಸರ್ ರವರು ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದಗಳನ್ನು ಅರ್ಪಿಸಿದರು.




- Advertisement -








