Tuesday, June 23, 2026
spot_imgspot_img
spot_imgspot_img

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಿಂದ ಬೀಡಾಡಿ ದನವನ್ನು ಕಾರ್ ನಲ್ಲಿ ಕದ್ದೊಯ್ಯಲು ಯತ್ನಿಸಿದ ಗೋ ಕಳ್ಳರು; ಸಿಸಿ ಟಿವಿಯಲ್ಲಿ ಸೆರೆಯಾದ ಕೃತ್ಯ

- Advertisement -
- Advertisement -

ಸುಬ್ರಹ್ಮಣ್ಯ: ವಿಶ್ವಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೀಡಾಡಿ ದನವೊಂದನ್ನು ಕಾರ್ ನಲ್ಲಿ ತುಂಬಿಸಿ ಕದ್ದೊಯ್ಯಲು ಗೋಕಳ್ಳರು ಯತ್ನಿಸಿರುವ ಘಟನೆ ನಡೆದಿದ್ದು, ಗೋ ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.

ಸುಬ್ರಹ್ಮಣ್ಯ ದೇವಾಲಯದ ವಠಾರದ ಪಾರ್ಕಿಂಗ್ ಜಾಗದಿಂದ ಆಂಜನೇಯ ಗುಡಿಯ ಹಿಂಭಾಗದಲ್ಲಿ ಮಲಗಿದ್ದ ಗೋವೊಂದನ್ನು ಹಿಡಿದು ಇನ್ನೋವಾ ಕಾರಿನಲ್ಲಿ ತುಂಬಿಸಿ ಕದ್ದೊಯ್ಯಲು ಯತ್ನಿಸಿರುವ ಘಟನೆ ಕಳೆದ 23ರ ನಸುಕಿನ ಜಾವ 3 ಗಂಟೆ ಸುಮಾರಿಗೆ ನಡೆದಿದೆ.

ಮಾರ್ಚ್ 25 ರಂದು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಸೆರೆಯಾಗಿರುವ ದೃಶ್ಯ ಬೆಚ್ಚಿ ಬೀಳಿಸುವಂತಿದೆ.

ದೇವಾಲಯದ ವಠಾರದಲ್ಲೇ ಗೋಕಳ್ಳರು ಕೈಚಳಕ ತೋರಲು ಮುಂದಾಗಿದ್ದು, ನೂಕಾಟ – ತಳ್ಳಾಟದ ವೇಳೆ ಕಳವಿಗೆ ಯತ್ನಿಸಿದ್ದವರ ಕೈಯಿಂದ ಗೋವು ತಪ್ಪಿಸಿಕೊಂಡು ಪರಾರಿಯಾಗಿದೆ.‌ ಸಿಸಿಟಿವಿ ಕ್ಯಾಮೆರಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

Related news

error: Content is protected !!