Friday, October 9, 2026
spot_imgspot_img
spot_imgspot_img

ಸುಳ್ಯ: ಜಾನುವಾರುಗಳಿಗೆ ಮೇವು ಕೊಡುವ ಹುಲ್ಲು ಕತ್ತರಿಸುವ ಯಂತ್ರದಿಂದ ವಿದ್ಯುತ್ ಪ್ರವಹಿಸಿ ಕೃಷಿಕ ಸಾವು

- Advertisement -
- Advertisement -

ಸುಳ್ಯ: ಜಾನುವಾರುಗಳಿಗೆ ಮೇವು ಕೊಡುವ ಹುಲ್ಲು ಕತ್ತರಿಸುವ ಯಂತ್ರದಿಂದ ವಿದ್ಯುತ್ ಪ್ರವಹಿಸಿ ಅಜ್ಜಾವರ ಗ್ರಾಮದ ನಾರಾಲು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಕೃಷಿಕ ಚಾಮಯ್ಯ ಗೌಡ (54) ವಿದ್ಯುತ್ ಶಾಕ್ ಗೆ ಬಲಿಯಾದವರು.

ಜು.14 ರಂದು ಮುಂಜಾನೆ ಚಾಮಯ್ಯ ಗೌಡರು ಮನೆಯ ಹಟ್ಟಿಯ ಬಳಿ ಜಾನುವಾರುಗಳಿಗೆ ನೀಡುವ ಮೇವು ಹುಲ್ಲು ಕತ್ತರಿಸುವ ಯಂತ್ರದ ಪ್ಲಗ್ ಹಾಕುವಾಗ ಅಚಾನಕ್ ಆಗಿ ಅವರಿಗೆ ವಿದ್ಯುತ್ ಶಾಕ್ ತಾಗಿ ಅವರು ಬೊಬ್ಬಿಟ್ಟರೆನ್ನಲಾಗಿದೆ.

ವಿಷಯ ತಿಳಿದು ಮನೆಯವರು ಸ್ಥಳಕ್ಕೆ ಹೋದಾಗ ಅವರು ಬಿದ್ದಿದ್ದರು. ಬಳಿಕ ಸುಳ್ಯ ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗೆ ಕೊನೆಯುಸಿರೆಳೆದಿದ್ದರೆಂದು ತಿಳಿದು ಬಂದಿದೆ.

- Advertisement -

Related news

error: Content is protected !!