Tuesday, September 1, 2026
spot_imgspot_img
spot_imgspot_img

ಸ್ನೇಹಿತರ ಜೊತೆ ಚಾಲೆಂಜ್ ಹಾಕಿ ಕೆರೆಯಲ್ಲಿ ಈಜಲು ಹೋದ ಯುವಕ ನೀರುಪಾಲು!

- Advertisement -
- Advertisement -
driving

ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋಗಿ ಯುವಕನೊಬ್ಬ ನೀರು ಪಾಲಾಗಿರುವ ಘಟನೆ ಗುಡಿಬಂಡೆ ತಾಲೂಕು ಹಂಪಸಂದ್ರ ಕೆರೆಯಲ್ಲಿ ಸಂಭವಿಸಿದೆ.

24 ವರ್ಷದ ಯುವಕ ಸಂತೋಷ್ ನಿನ್ನೆ ಸಂಜೆಯ ವೇಳೆ ಮೂರು ಮಂದಿ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಾಡಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಸ್ನೇಹಿತರ ಜೊತೆ ಚಾಲೆಂಜ್ ಹಾಕಿ ಸಂತೋಷ್ ಈಜಲು ಹೋಗಿದ್ದ ಎಂಬ ಮಾಹಿತಿ ತಿಳಿದುಬಂದಿದೆ.

ಆದರೆ ಈಜಿ ದಡ ಸೇರಬೇಕಿದ್ದ ಯುವಕ ಕೆರೆ ಪಾಲಾಗಿದ್ದಾನೆ. ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!