- Advertisement -
- Advertisement -


ಕೊಲ್ಲೂರು: ಇಲ್ಲಿನ ಹೊಸೂರು ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ ಹುಂಡಿಯಿಂದ ಸಾವಿರಾರು ರೂ. ನಗದು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಕಳ್ಳರು ದೇವಸ್ಥಾನದ ಸಣ್ಣ ಹುಂಡಿಯಲ್ಲಿದ್ದ ನಾಣ್ಯಗಳನ್ನು ಅಲ್ಲೇ ಬಿಟ್ಟು ನೋಟುಗಳನ್ನು ಕಳವು ಮಾಡಿದ್ದಾರೆ. ಕಳ್ಳರು ದೇವಸ್ಥಾನದ ಹಿಂದಿನ ಬಾಗಿಲಿನಿಂದ ಒಳ ನುಗ್ಗಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಸ್ಥಳೀಯರು ಅಥವಾ ಕುಡಿತದ ಚಟ ಹೊಂದಿರುವವರು ಈ ಕೃತ್ಯವೆಸಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.


- Advertisement -








