Thursday, August 6, 2026
spot_imgspot_img
spot_imgspot_img

ಅಫ್ಘಾನ್​ನಲ್ಲಿ 100 ಮಾಜಿ ಅಧಿಕಾರಿಗಳ ಕಗ್ಗೊಲೆ; ತಾಲಿಬಾನಿಗಳ ಕ್ರೂರತೆ ಬಿಚ್ಚಿಟ್ಟ ಹ್ಯೂಮನ್ ರೈಟ್ಸ್​

- Advertisement -
- Advertisement -
vtv vitla
vtv vitla

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೇರಿದ ತಾಲಿಬಾನ್​​ ತನ್ನ ಅಟ್ಟಹಾಸ ಮುಂದುವರೆಸಿದೆ. 100ಕ್ಕೂ ಹೆಚ್ಚು ಮಾಜಿ ಪೊಲೀಸ್ ಮತ್ತು ಗುಪ್ತಚರ ಅಧಿಕಾರಿಗಳನ್ನು ತಾಲಿಬಾನಿಗಳು ಕೊಂದಿದ್ದಾರೆ ಅಥವಾ ಕಣ್ಮರೆಯಾಗಿದ್ದಾರೆ ಅಂತ ಮಾನವ ಹಕ್ಕುಗಳ ಆಯೋಗ ಹೇಳಿದೆ.

ಸರ್ಕಾರಿ ದಾಖಲೆಗಳನ್ನ ತಡಕಾಡಿ ಮಾಜಿ ಅಧಿಕಾರಿಗಳ ಮಾಹಿತಿ ಕಲೆಹಾಕುವುದರ ಮೂಲಕ ತಾಲಿಬಾನ್​​​ ಪಡೆ ಬೇಟೆಯಾಡುತ್ತಿದೆ. ಇನ್ನು ಶರಣಾಗತಿಯಾಗುವ ಮೂಲಕ ತಮ್ಮ ಸುರಕ್ಷತೆಯನ್ನ ಖಾತ್ರಿಪಡಿಸಿಕೊಂಡ ಅಧಿಕಾರಿಗಳನ್ನೂ ಸಹ ತಾಲಿಬಾನ್​ ಪಡೆಗಳು ಹತ್ಯೆ ಮಾಡಿವೆ ಅಂತಾ ಹೇಳಲಾಗಿದೆ.

vtv vitla
vtv vitla

ಹತ್ಯೆಗಳ ಮಾದರಿಯು ಅಫ್ಘಾನಿಸ್ತಾನದಾದ್ಯಂತ ಭಯೋತ್ಪಾದನೆಯನ್ನು ಬಿತ್ತಿದೆ. ಏಕೆಂದರೆ ಹಿಂದಿನ ಸರ್ಕಾರದೊಂದಿಗೆ ಸಂಬಂಧ ಹೊಂದಿರುವ ಯಾರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ತಮ್ಮ ಪ್ರತೀಕಾರವನ್ನ ತೀರಿಸಿಕೊಳ್ತಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗ ಆರೋಪ ಮಾಡಿದೆ.

ಆಗಸ್ಟ್ 15 ರಂದು ಕಾಬೂಲ್‌ ಸೇರಿದಂತೆ ಸಂಪೂರ್ಣ ಅಫ್ಘಾನಿಸ್ತಾನವನ್ನ ತಾಲಿಬಾನ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 20 ವರ್ಷಗಳ ಬಳಿಕ ಅಮೆರಿಕ ತನ್ನ ಸೇನೆಯನ್ನ ಹಿಂತೆಗೆದುಕೊಂಡ ನಂತರ ಅಫ್ಘಾನ್​ನಲ್ಲಿ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿವೆ.

- Advertisement -

Related news

error: Content is protected !!