Tuesday, September 15, 2026
spot_imgspot_img
spot_imgspot_img

ಇಂದ್ರಾಳಿ: ತಾಯಿಯನ್ನು ನಿಂದಿಸಿದಾತನ ಕೊಲೆ; ಇಬ್ಬರು ಆರೋಪಿಗಳ ಬಂಧನ

- Advertisement -
- Advertisement -

ಉಡುಪಿ: ತಾಯಿಗೆ ನಿಂದಿಸಿದ ಕಾರಣಕ್ಕೆ ವ್ಯಕ್ತಿಯನ್ನು ಮರದ ಕೊಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಮಣಿಪಾಲದ ರಾಷ್ಟ್ರೀಯ ಹೆದ್ದಾರಿಯ ಇಂದ್ರಾಳಿಯ ರೈಲ್ವೆ ನಿಲ್ದಾಣದ ಕಡೆಗೆ ಹೋಗುವ ರಸ್ತೆಯಲ್ಲಿ ಇಂದು ಸಂಜೆ 5.30 ಕ್ಕೆ ನಡೆದಿದೆ.

ತಮಿಳುನಾಡು ಮೂಲದ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿನ ಹೊಟೇಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ (45) ಕೊಲೆಯಾದ ವ್ಯಕ್ತಿ. ಇಂದು ಸಂಜೆ ತಮಿಳುನಾಡಿನಿಂದ ಗೋವಾಕ್ಕೆ ಕುಟ್ಟಿ ಹಾಗೂ ನವೀನ್ ಹೊರಟಿದ್ದರು. ಇಂದ್ರಾಳಿ‌ ರೈಲ್ವೇ ನಿಲ್ದಾಣದಲ್ಲಿ ಹಲವು ಹೊತ್ತು ರೈಲು ನಿಲ್ಲುವುದು ತಿಳಿದ ಕುಟ್ಟಿ ಹಾಗೂ ನವೀನ್ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದರು. ಬಳಿಕ ಯಾವುದೇ ಪರಿಚಯ‌ ಇಲ್ಲದಿದ್ದರೂ ತಮಿಳು ಮಾತನಾಡುವ ಕುಮಾರ್ ಜೊತೆ ಮಾತನಾಡಿ ಅಲ್ಲೇ ಇದ್ದ ಬಾರ್ ಗೆ ಹೋಗಿ ಮದ್ಯ ಕುಡಿದಿದ್ದರು ಎನ್ನಲಾಗಿದೆ.

ಬಳಿಕ ಮದ್ಯಪಾನ ಮಾಡಿ ನಡೆದುಕೊಂಡು ಬರುವಾಗ ಕುಮಾರ್ ಎಂಬುವವನು ಕುಡಿದ ಅಮಲಿನಲ್ಲಿ ನವೀನ್ ಮತ್ತು ಕುಟ್ಟಿಯ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಈ ವೇಳೆ ಮೂವರ ನಡುವೆ ಮಾತಿಗೆ ಮಾತು ಬೆಳೆದಿದ್ದು, ನಂತರ ನವೀನ್ ಮತ್ತು ಕುಟ್ಟಿ ಸೇರಿ ಮರದ ಸೊಂಟೆಯಿಂದ ಕುಮಾರನ ತಲೆಗೆ ಹೊಡೆದಾಗ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಗಂಭೀರ ಹಲ್ಲೆಗೊಂಡು ಬಿದ್ದಿದ್ದ ಕುಮಾರ್ ನನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಿದ್ದರಾದರೂ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕೃತ್ಯ ಎಸಗಿ ಪರಾರಿಯಾಗಲು ಯತ್ನಿಸಿದ್ದ ನವೀನ್ ಮತ್ತು ಕುಟ್ಟಿಯನ್ನು ಸ್ಥಳೀಯರು, ರಿಕ್ಷಾ, ಕಾರು ಚಾಲಕರು ಮತ್ತು ಆರ್.ಸಿ.ಎಫ್ ನವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

- Advertisement -

Related news

error: Content is protected !!