Monday, September 28, 2026
spot_imgspot_img
spot_imgspot_img

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಯಾತ್ರಾರ್ಥಿಗಳಿದ್ದ ಬಸ್ ಪಲ್ಟಿ; 20ಕ್ಕೂ ಅಧಿಕ ಮಂದಿಗೆ ಗಾಯ..!

- Advertisement -
- Advertisement -

ಉಡುಪಿ: ಯಾತ್ರಾರ್ಥಿಗಳಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಉಡುಪಿ ಜಿಲ್ಲೆಯ ಕೊಲ್ಲೂರಿನ ಸಮೀಪ ನಡೆದಿದೆ.

vtv vitla

ಕೋಲಾರ ಜಿಲ್ಲೆಯಿಂದ ಕೊಲ್ಲೂರು ಕ್ಷೇತ್ರಕ್ಕೆ 42 ಜನ ಬಸ್‌ ಮೂಲಕ ಯಾತ್ರೆ ಮಾಡಿದ್ದರು. ನಿನ್ನೆ ಕೊಲ್ಲೂರು ಗ್ರಾಮದ ಸಮೀಪ ಎನ್‌ಎಚ್‌ 76 ರಸ್ತೆಯ ಒಣ್ಕಣ್ ಮೋರಿ ತಿರುವಿನಲ್ಲಿ ಬಸ್‌ನ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ್ದಾನೆ ಎನ್ನಲಾಗಿದೆ.

ಪರಿಣಾಮ ಬಸ್ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಉರುಳಿ ಬಿದ್ದಿದೆ. ಇನ್ನು ಘಟನೆಯಲ್ಲಿ 20ಕ್ಕೂ ಅಧಿಕ ಮಂದಿಗೆ ಗಾಯವಾಗಿದ್ದು, ಹಲವರ ಕೈ ಮುರಿತಕ್ಕೊಳಗಾಗಿದ್ದಾರೆ, ಸದ್ಯ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಘಟನೆ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!