Friday, August 19, 2022
spot_imgspot_img
spot_imgspot_img

ಉಡುಪಿ: ಮಿಕ್ಸಿಯಲ್ಲಿ ತಾಂತ್ರಿಕ ದೋಷ; 20,189 ರೂ. ಪರಿಹಾರಕ್ಕೆ ಗ್ರಾಹಕರ ವೇದಿಕೆ ಆದೇಶ

- Advertisement -G L Acharya G L Acharya
- Advertisement -

ಉಡುಪಿ: ಉಪನ್ಯಾಸಕಿಯೊಬ್ಬರಿಗೆ ತಾಂತ್ರಿಕ ದೋಷವಿದ್ದ ಮಿಕ್ಸರ್ ಗ್ರೈಂಡರ್ ಮಾರಾಟ ಮಾಡಿದ್ದ ಉಡುಪಿಯ ಪೈ ಇಂಟರ್‌ನ್ಯಾಷನಲ್ ಹಾಗೂ ಪ್ರೀತಿ ಕಿಚನ್ ಅಪ್ಲೆಯನ್ಸಸ್ ಪ್ರೈ.ಲಿ. ಪರಿಹಾರ ಒದಗಿಸಬೇಕು ಎಂದು ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.

ಉಪನ್ಯಾಸಕಿಯ ಪರ ತೀರ್ಪು ನೀಡಿದ ಜಿಲ್ಲಾ ಗ್ರಾಹಕರ ಆಯೋಗ 20,189 ರೂ.ಪರಿಹಾರ ಒದಗಿಸಬೇಕೆಂದು ಆದೇಶಿಸಿದೆ.

ಉಪನ್ಯಾಸಕಿ ಅನಿತಾ ಅವರು ಎರಡು ವರ್ಷಗಳ ಹಿಂದೆ ಪೈ ಇಂಟರ್‌ನ್ಯಾಷನಲ್‌ ನಲ್ಲಿ 4,239 ರೂ.ಗಳನ್ನು ನೀಡಿ ಪ್ರೀತಿ ಮಿಕ್ಸರ್ ಗ್ರೈಂಡರ್ ಖರೀದಿಸಿದ್ದರು. ಆದರೆ ಮೂರೇ ತಿಂಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಮಿಕ್ಸಿಗೆ ಎರಡು ವರ್ಷಗಳ ಗ್ಯಾರಂಟಿ ಮತ್ತು 5 ವರ್ಷಗಳ ವಾರೆಂಟಿ ಇರುವುದರಿಂದ ಹೊಸ ಮಿಕ್ಸಿ ಕೊಡುವಂತೆ ಗ್ರಾಹಕಿ ಮನವಿ ಮಾಡಿದ್ದರು. ಆದರೆ ಪೈ ಇಂಟರ್‌ನ್ಯಾಷನಲ್‌ ನವರು ಬದಲಿ ಮಿಕ್ಸಿಯನ್ನು ಕೊಡಲು ಒಪ್ಪದೇ ಅದೇ ಮಿಕ್ಸಿಯನ್ನು ಸರಿಪಡಿಸಿ ಕೊಟ್ಟಿದ್ದರು. ಅದರ ಅನಂತರವೂ ಮೂರು ತಿಂಗಳಿಗೊಮ್ಮೆ ಮಿಕ್ಸಿಯಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿದ್ದವು.

ಬದಲಿ ಮಿಕ್ಸಿ ಕೊಡಲು ಒಪ್ಪದಿದ್ದಾಗ ಗ್ರಾಹಕಿ ಅನಿತಾ ಅವರು ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪೈ ಇಂಟರ್‌ನ್ಯಾಾಷನಲ್ ಹಾಗೂ ಪ್ರೀತಿ ಕಿಚನ್ ಅಪ್ಲೆಯನ್ಸಸ್ ಪ್ರೈ.ಲಿ.ವಿರುದ್ಧ ದಾವೆ ಹೂಡಿದರು. ಗ್ರಾಹಕಿಯ ದೂರನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕರ ಆಯೋಗ ಖರೀದಿಸಿದ್ದ ಮಿಕ್ಸಿಯ ದರ, ಅದರ ಬಡ್ಡಿಯ ಮೊತ್ತ, ಅವರ ಕೆಲಸದಲ್ಲಾದ ತೊಂದರೆ, ಮಾನಸಿಕ ಮತ್ತು ದೈಹಿಕ ಶ್ರಮ, ಓಡಾಟದ ಖರ್ಚು ಕೋರ್ಟ್ ವ್ಯವಹಾರದ ಖರ್ಚು ಹೀಗೆ ಒಟ್ಟು 20,189 ರೂ.ಗಳನ್ನು ಗ್ರಾಹಕಿಗೆ ನೀಡಬೇಕೆಂದು ಜಿಲ್ಲಾ ಗ್ರಾಾಹಕರ ವ್ಯಾಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ಸುನೀಲ ಮಾಸರೆಡ್ಡಿ ಆದೇಶ ಹೊರಡಿಸಿದ್ದಾರೆ.

ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉಪನ್ಯಾಸಕಿಯಾಗಿ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಈ ಪ್ರಕರಣ ದಾಖಲಿಸಲು ಉಪನ್ಯಾಸಕಿ ಸುಜಾತಾ ಸುಧೀರ್, ನ್ಯಾಯವಾದಿಗಳಾದ ವಿದ್ಯಾ ಭಟ್, ಅಂಜಲಿನ್, ಜಯಶ್ರೀ ಶೆಟ್ಟಿ ಹಾಗೂ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಿಬ್ಬಂದಿ ಸಹಕರಿಸಿದ್ದಾರೆ.

- Advertisement -

Related news

error: Content is protected !!