- Advertisement -
- Advertisement -
ಪುತ್ತೂರು: ಉಪ್ಪಿನಂಗಡಿ ಇಳಂತಿಲದಲ್ಲಿ ಬೈಕೊಂದನ್ನು ಅಡ್ಡಗಟ್ಟಿ ಎಲೆಕ್ಟ್ರೀಷಿಯನ್ ಒಬ್ಬರಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಜೂ.30 ರ ತಡರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿ ಇತ್ತಂಡದ ಮೂವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಹಲ್ಲೆಗೊಳಗಾದವರ ಪೈಕಿ ಬೈಕ್ ಸವಾರ ಎಲೆಕ್ಟ್ರೀಷಿಯನ್ ಇಳಂತಿಲ ಎಣ್ಮಾಡಿ ನಿವಾಸಿ ಮಂಜುನಾಥ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಜುನಾಥ್ ರಾತ್ರಿ ಮನೆಗೆ ಬಂದು ಬೈಕ್‌ನಲ್ಲಿ ಪೇಟೆಗೆ ಹೋಗಿ ಮತ್ತೆ ಮನೆಗೆ ಹಿಂದಿರುಗುವಾಗ ಇಳಂತಿಲ ಬಳಿ ನಾಲ್ಕೈದು ಮಂದಿ ಬೈಕ್ ಅನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರ ಪೈಕಿ ಒಬ್ಬ ಸ್ವಸ್ತಿಕ್ ಎಂದು ಆರೋಪಿಸಿದ್ದಾರೆ.
- Advertisement -