Tuesday, August 4, 2026
spot_imgspot_img
spot_imgspot_img

ಎರಡೂ ಡೋಸ್ ಲಸಿಕೆ ಪಡೆದರೆ ಶೇ.98ರಷ್ಟು ಕೊರೊನಾ ಸಾವಿನಿಂದ ರಕ್ಷಣೆ; ಕೇಂದ್ರ ಸರ್ಕಾರ

- Advertisement -
- Advertisement -

ನವದೆಹಲಿ: ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡರೆ ಕೊರೊನಾದಿಂದ ಸಾಯುವುದನ್ನು ಶೇ.98ರಷ್ಟು ರಕ್ಷಣೆಯನ್ನು ನೀಡುತ್ತದೆ. ಆದರೆ ಒಂದು ಡೋಸ್ ಶೇ.92ರಷ್ಟು ರಕ್ಷಣೆ ನೀಡಲಿದೆ ಎಂಬುದನ್ನು ಪಂಜಾನ್ ಪೊಲೀಸ್ ಸಿಬ್ಬಂದಿಗಳ ಮೇಲೆ ನಡೆಸಿದ ಅಧ್ಯಯನದ ಅಂಶವನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರ ತಿಳಿಸಿದೆ.

ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಪಂಜಾಬ್ ಸರ್ಕಾರದ ಸಹಯೋಗದೊಂದಿಗೆ ಈ ಅಧ್ಯಯನ ನಡೆಸಿದೆ ಎನ್ನಲಾಗಿದೆ.

ಇನ್ನು ಈ ಅಧ್ಯಯನದ ಅಂಕಿ ಅಂಶವನ್ನು ಹಂಚಿಕೊಂಡಿರುವ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್, 4,868 ಪೊಲೀಸ್ ಸಿಬಂದಿಗೆ ಲಸಿಕೆ ನೀಡಿಲ್ಲ ಮತ್ತು ಅವರಲ್ಲಿ 15 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದು ಪ್ರತಿ ಸಾವಿರಕ್ಕೆ 3.08ರಷ್ಟು ಸಾವಿನ ಪ್ರಮಾಣ ಇಳಿಕೆಯಾಗಿದೆ ಎಂಬುದನ್ನು ಸಾಬೀತುಪಡಿಸಿದೆ” ಎಂದು ತಿಳಿಸಿದ್ದಾರೆ.

ಒಟ್ಟು 42,720 ಪೊಲೀಸ್ ಸಿಬಂದಿಗಳು ಕೊರೊನಾ ಎರಡೂ ಡೋಸ್ ಗಳನ್ನು ಪಡೆದಿದ್ದು, ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಅಧ್ಯಯನದಿಂದ ಪ್ರತಿ ಸಾವಿರಕ್ಕೆ ಸಾವಿನ ಪ್ರಮಾಣ 0.05ರಷ್ಟು ಸಂಭವಿಸುತ್ತದೆ ಎಂದು ಪೌಲ್ ಹೇಳಿದ್ದಾರೆ.

- Advertisement -

Related news

error: Content is protected !!