Friday, June 5, 2026
spot_imgspot_img
spot_imgspot_img

ಕಾಮಾಂಧ ಮದ್ರಸ ಶಿಕ್ಷಕ ಹಾಗೂ ಹಿರಿಯ ವಿದ್ಯಾರ್ಥಿಯಿಂದ ಹೇಯ ಕೃತ್ಯ; ಮೂವರು ಬಾಲಕರ ಮೇಲೆ ಮದ್ರಸದಲ್ಲಿಯೇ ಅತ್ಯಾಚಾರ

- Advertisement -
- Advertisement -

ಕಣ್ಣೂರು: ಕಾಮಾಂಧ ಮದ್ರಸ ಶಿಕ್ಷಕ ಹಾಗೂ ಕರ್ನಾಟಕ ಮೂಲದ ಹಿರಿಯ ವಿದ್ಯಾರ್ಥಿಯೋರ್ವ ಮದ್ರಸಾದಲ್ಲಿಯೇ 12 ವರ್ಷದೊಳಗಿನ ಮೂವರು ಬಾಲಕರ ಮೇಲೆ ಅತ್ಯಾಚಾರ ನಡೆಸಿದ ಘಟನೆ ಕೇರಳದ ಕಣ್ಣೂರಿನ ಪನೂರು ಎಂಬಲ್ಲಿ ನಡೆದಿದೆ.

ಈ ಆರೋಪದ ಮೇಲೆ ಮದ್ರಸ ಶಿಕ್ಷಕ ಹಾಗೂ ಹಿರಿಯ ವಿದ್ಯಾರ್ಥಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಟ್ಟನ್ನೂರು ಚಾವಸ್ಸೆರಿ ಅಬ್ದುಲ್ ರಶೀದ್ ಮತ್ತು ವಿದ್ಯಾರ್ಥಿ ಕರ್ನಾಟಕದ ಮೂಲದ ಬಿಲಾಲ್ ಎನ್ನಲಾಗಿದೆ.

ಬಂಧಿತರನ್ನು ತಲಶ್ಶೇರಿ ನ್ಯಾಯಾಲಯ ರಿಮಾಂಡ್ ಮಾಡಿದೆ. 12 ವರ್ಷದೊಳಗಿನ ಮೂವರು ಬಾಲಕರಿಗೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಇವರ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದೆ. ರಶೀದ್‌ ನನ್ನು ತಲಶ್ಶೇರಿಯಲ್ಲಿ ಮತ್ತು ಬಿಲಾಲ್‌ ನನ್ನು ಕೊಯಿಲಾಂಡಿಯಿಂದ ಬಂಧಿಸಲಾಗಿದೆ. ಮಕ್ಕಳ ವರ್ತನೆಯಿಂದ ಪೋಷಕರಿಗೆ ಅನುಮಾನ ಬಂದು ತನಿಖೆ ನಡೆಸಿದಾಗ ಘಟನೆ ಬಗ್ಗೆ ವಿವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!