Sunday, October 4, 2026
spot_imgspot_img
spot_imgspot_img

ಕಾರ್ಕಳ: ನೀರು ಎಂದು ತಿಳಿದು ಆಸಿಡ್ ಕುಡಿದ ಯುವತಿ; ಕ್ಯಾಶ್ಯೂ ಪ್ಯಾಕ್ಟರಿಯ ಮಾಲಕನ ವಿರುದ್ಧ FIR!

- Advertisement -
- Advertisement -

ಕಾರ್ಕಳ: ಬಾಯಾರಿಕೆ ನೀಗಿಸಲು ತಣ್ಣೀರೆಂದು ಭಾವಿಸಿ ಆಸಿಡ್ ಕುಡಿದು ಯುವತಿಯೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಸ್ವಸ್ಥಗೊಂಡ ಯುವತಿ ಮುಡಾರು ಗ್ರಾಮದ ಬಜರ್ಕಳ ದರ್ಕಾಸು ಮನೆಯ ತೇಜಸ್ವಿನಿ (20) ಎನ್ನಲಾಗಿದೆ.

ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿನ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಕಳೆದ 1 ವರ್ಷದಿಂದ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದ ತೇಜಸ್ವಿನಿ ಜು.2ರಂದು ಬಾಯಾರಿಕೆಯಾಗಿರುವುದರಿಂದ ತಣ್ಣೀರು ಎಂದು ಬಾಟಲಿಯಲ್ಲಿ ಇದ್ದ ಆಸಿಡ್ ಕುಡಿದು ತೀವ್ರ ಅಸ್ವಸ್ಥಗೊಳ್ಳಗಾಗಿದ್ದಳು.

ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಆಸ್ಪತ್ರೆಯ ವೆಚ್ಚ ತಾನು ಭರಿಸುವುದಾಗಿ ಫ್ಯಾಕ್ಟರಿಯ ಮಾಲಿಕರ ನೀಡಿದ ಭರವಸೆಯನ್ನು ನಂಬಿದ ಯುವತಿ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿ ಕಾನೂನು ಕ್ರಮದ ಅಗತ್ಯ ಇಲ್ಲ ಎಂದು ತಿಳಿಸಿದ್ದಳು.

ಅಸ್ಪಸ್ಥಗೊಂಡ ಯುವತಿಯನ್ನು ವಿಚಾರಿಸಲು ಮುಂದಾಗದೇ, ಆಸ್ಪತ್ರೆಗೆ ಕೂಡಾ ಬಾರದೇ, ಆಸ್ಪತ್ರೆ ವೆಚ್ಚ ನೀಡದೇ ನಂಬಿಕೆ ದ್ರೋಹ ಹಾಗೂ ಘಟನೆಯ ಕಾರಣರಾಗಿರುವ ಫ್ಯಾಕ್ಟರಿ ಮಾಲಕ ಗಣೇಶ್ ಕಾಮತ್ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

driving
- Advertisement -

Related news

error: Content is protected !!