- Advertisement -
- Advertisement -



ಕಾಸರಗೋಡು: ಅಪ್ರಾಪ್ತೆಯನ್ನು ಸಾಮೂಹಿಕ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಪರಾಧಿಗಳಿಗೆ ಕಾಸರಗೋಡು ಜಿಲ್ಲಾ ಸತ್ರ ನ್ಯಾಯಾಲಯ 23 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
೨೦೧೭ರಲ್ಲಿ ನಡೆದ ಪರಪ್ಪ ಎಂಬಲ್ಲಿ ಅಪ್ರಾಪ್ತೆಯನ್ನು ಕಾಡಿಗೆ ಬಲವಂತವಾಗಿ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ದೇಲಂಪಾಡಿ ನಿವಾಸಿಗಳಾದ ಎ ವಿ ನಿಝಾರ್ (33) ಮತ್ತು ಎಂ ಉಮ್ಮರ್ ಶಾಫಿ (33) ಎಂಬವರಿಗೆ ಶಿಕ್ಷೆ ವಿಧಿಸಲಾಗಿದೆ.

ಫೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿದ್ದ ಇವರಿಗೆ ಕಾಸರಗೋಡು ಜಿಲ್ಲಾ ಸತ್ರ ನ್ಯಾಯಾಲಯ 23 ವರ್ಷಗಳ ಜೈಲು ಶಿಕ್ಷೆ ಮತ್ತು ಒಂದೂವರೆ ಲಕ್ಷ ರೂ ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದ್ದಲ್ಲಿ ಒಂದೂವರೆ ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
- Advertisement -