Tuesday, September 15, 2026
spot_imgspot_img
spot_imgspot_img

ಕಾಸರಗೋಡು: ಆಯಿಲ್ ಮಿಲ್‌ನಿಂದ ಲಕ್ಷಾಂತರ ರೂ. ಕಳ್ಳತನ; ಇಬ್ಬರ ಬಂಧನ..!

- Advertisement -
- Advertisement -

ಕಾಸರಗೋಡು: ಆಯಿಲ್ ಮಿಲ್‌ನಿಂದ ಎರಡೂವರೆ ಲಕ್ಷ ರೂ. ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ವಿಟ್ಲದ ಮುಹಮ್ಮದ್ ಅಜರುದ್ದೀನ್ (35) ಮತ್ತು ಕಲ್ಲಕಟ್ಟದ ಸಲೀಂ (26) ಬಂಧಿತರು. ಮೇ 3 ರಂದು ರಾತ್ರಿ ವಿದ್ಯಾನಗರ ದ ಲ್ಲಿರುವ ಕಾಸರಗೋಡು ಸರಕಾರಿ ಕಾಲೇಜು ಪರಿಸರದ ಆಯಿಲ್ ಮಿಲ್ ನ ಬೀಗ ಮುರಿದು ಒಳನುಗ್ಗಿ ನಗದು ಕಳವು ಮಾಡಲಾಗಿತ್ತು. ಮಿಲ್ ನ ಮಾಲಕ ಚೆಮ್ನಾಡ್ ಅಬ್ದುಲ್ ರಹಿಮಾನ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಸಿಸಿ ಟಿವಿ ದೃಶ್ಯಗಳನ್ನು ಕಲೆ ಹಾಕಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳ ಗುರುತು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇವರು ಆಯಿಲ್ ಮಿಲ್ ಸಮೀಪದ ಆಸ್ಪತ್ರೆಯೊಂದರ ಸಮೀಪ ನಿಲ್ಲಿಸಿದ್ದ ಟೂರಿಸ್ಟ್ ಬಸ್ ನ ಸ್ಟೀರಿಯೋ ಸೆಟ್ ನ್ನು ಕಳವುಗೈಯ್ಯಲು ಯತ್ನಿಸಿದ್ದು, ಶಬ್ದ ಕೇಳಿ ಸಿಬಂದಿಗಳು ಇಬ್ಬರನ್ನು ಓಡಿಸಿದ್ದರು. ಅದೇ ದಿನ ರಾತ್ರಿ ಆಯಿಲ್ ಮಿಲ್ ನಲ್ಲಿ ಕಳವು ನಡೆದಿತ್ತು.

- Advertisement -

Related news

error: Content is protected !!