Tuesday, September 22, 2026
spot_imgspot_img
spot_imgspot_img

ಕಾಸರಗೋಡು: ಶವರ್ಮ ಸೇವಿಸಿ ವಿದ್ಯಾರ್ಥಿನಿ ಸಾವಿಗೆ ಕಾರಣ ಸ್ಪಷ್ಟಪಡಿಸಿದ ಆರೋಗ್ಯಾಧಿಕಾರಿ

- Advertisement -
- Advertisement -

ಕಾಸರಗೋಡು: ಚೆರ್ವತ್ತೂರಿನ ಕೂಲ್‌ಬಾರ್‌ನಲ್ಲಿ ಶವರ್ಮ ಸೇವಿಸಿದ ವಿದ್ಯಾರ್ಥಿನಿಯ ಸಾವಿಗೆ ಶಿಗಲ್ಲಾ ಬ್ಯಾಕ್ಟೀರಿಯಾ ಕಾರಣ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ.ರಾಮದಾಸ್ ತಿಳಿಸಿದ್ದಾರೆ.

ವಿಷಾಹಾರ ಸೇವನೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿರುವವರ ರಕ್ತ ಮೊದಲಾದವುಗಳ ತಪಾಸಣೆಯಲ್ಲಿ ಶಿಗಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ.

ಕೋಜಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿತ್ತು. ಇದರಿಂದ ಶಿಗಲ್ಲಾ ಬ್ಯಾಕ್ಟೀರಿಯಾ ಅಂಶ ಪತ್ತೆಯಾಗಿದ್ದು, ಜನರು ಇಂತಹ ಆಹಾರ ಸೇವಿಸುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!