Friday, September 11, 2026
spot_imgspot_img
spot_imgspot_img

ಕುಂದಾಪುರ: ಮೀನುಗಾರಿಕೆ ಸಂದರ್ಭ ನದಿ ಬಿದ್ದು ಯುವಕ ನಾಪತ್ತೆ

- Advertisement -
- Advertisement -

ಕುಂದಾಪುರ: ಬೋಟಿನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭ ನದಿಗೆ ಬಿದ್ದ ಯುವಕನೊಬ್ಬ ನಾಪತ್ತೆಯಾದ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಕುಂದಾಪುರ ತಾಲೂಕಿನ ಮರವಂತೆ ಗ್ರಾಮದ ಜನತಾ ಕಾಲೋನಿಯ ನಿವಾಸಿ ಓಮ್ಮಯ್ಯ ಪಾಂಡು ತಾಂಡೇಲ ಎಂಬುವರ ಪುತ್ರ ರಘುವೀರ ತಾಂಡೇಲ (28) ಎಂಬಾತನೇ ನದಿಗೆ ಬಿದ್ದು ನಾಪತ್ತೆಯಾದ ವ್ಯಕ್ತಿ.

ಸಾಗರದೀಪ ಎಂಬ ಬೋಟಿನಲ್ಲಿ ಗಣೇಶ, ರವಿ, ರಘುವೀರ ಹಾಗೂ ಇತರರೊಂದಿಗೆ ಬುಧವಾಋ ರಾತ್ರಿ 10 ಗಂಟೆ ಸುಮಾರಿಗೆ ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ರಸ್ತೆಯ ಬಳಿ ಇರುವ ಮ್ಯಾಂಗನೀಸ್ ವಾರ್ಪನಿಂದ ಪಂಚಗಂಗಾವಳಿ ನದಿಯಲ್ಲಿ ಮೀನುಗಾರಿಕೆ ಹೊರಟಾಗ ಬೋಟ್ನಲ್ಲಿ ಕುಳಿತಿರುವ ರಘುವೀರ ತಂಡೇಲ (28 ವರ್ಷ) ಎಂಬವರು ಆಕಸ್ಮಿಕವಾಗಿ ಆಯಾತಪ್ಪಿ ಬೋಟ್ನಿಂದ ಪಂಚಗಂಗಾವಳಿ ನದಿಯ ನೀರಿಗೆ ಬಿದ್ದು ಕಾಣೆಯಾಗಿದ್ದಾನೆ ಎಂದು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!