Wednesday, June 17, 2026
spot_imgspot_img
spot_imgspot_img

ಕೇರಳದಲ್ಲಿ ಕೊರೊನ ಹೆಚ್ಚಳ ಹಿನ್ನೆಲೆ; ದ.ಕ ಜಿಲ್ಲೆಯಲ್ಲಿ ಮದ್ಯದಂಗಡಿ ಮತ್ತು ಶೇಂದಿ ಅಂಗಡಿಗಳು ಬಂದ್..!

- Advertisement -
- Advertisement -

ಮಂಗಳೂರು: ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವುದರಿಂದ ಕೇರಳ ರಾಜ್ಯದ ಗಡಿಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮದ್ಯದಂಗಡಿ ಬಂದ್ ಮಾಡಲಾಗಿದೆ.

ಕೇರಳದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವುದರಿಂದ ಕೇರಳದ ಗಡಿಭಾಗದ ಜನತೆ ದಕ್ಷಿಣ ಕನ್ನಡ ಜಿಲ್ಲೆಯ ಮದ್ಯದಂಗಡಿಗಳನ್ನು ಅವಲಂಬಿಸಿರುದರಿಂದ ಕೊರೊನಾ ಪ್ರಸರಣವಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ತಾಲೂಕು ಪ್ರದೇಶಗಳ 5 ಕಿ.ಮೀ, ವ್ಯಾಪ್ತಿಯಲ್ಲಿರುವ ಕೇರಳ ಗಡಿ ಸಮೀಪದ 24 ಮದ್ಯದಂಗಡಿ ಮತ್ತು 5 ಶೇಂದಿ ಅಂಗಡಿಗಳನ್ನು ಇಂದಿನಿಂದ ಆಗಸ್ಟ್‌ 15ರವರೆಗೆ ಮುಚ್ಚಲು ಆದೇಶಿಸಿದ್ದಾರೆ.

- Advertisement -

Related news

error: Content is protected !!