Sunday, September 13, 2026
spot_imgspot_img
spot_imgspot_img

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಪರಿವಾರ ಸಂಘಟನೆ ಆಶ್ರಯದಲ್ಲಿ ‘ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಷಣ್ಮುಖ ಸುಬ್ರಮಣ್ಯ ದೇವಸ್ಥಾನ ಕೋಲ್ಪೆ ಮತ್ತು ಪರಿವಾರ ಸಂಘಟನೆ ಆಶ್ರಯದಲ್ಲಿ ‘ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮವು ಪೊಯ್ಯೆ ಹೊನ್ನಪ್ಪ ಗೌಡರ ಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹೊನ್ನಪ್ಪ ಗೌಡ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಈಶ್ವರ ಗೌಡ, ಯಶೋದ ನಾಯ್ತೊಟ್ಟು, ವಾಸು ಸಪಲ್ಯ, ಶಶಿಧರ ಭಂಡಾರಿ, ಸುರೇಶ್ ಭಟ್, ಸುರೇಶ ಪೂಜಾರಿ, ರಾಜರಾಮ ಶೆಟ್ಟಿ, ಸುಧೀರ್ ಶೆಟ್ಟಿ, ತಿಲಕ್ ರಾಜ್ ಶೆಟ್ಟಿ, ವಿಜಯ ಸರಸ್ವತಿ ಹಾಗೂ ಪಂಚಾಯತ್ ಸದಸ್ಯರಾದ ಭಾರತಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳಿದ್ದು, 1 ರಿಂದ 3ನೇ ತರಗತಿ ಮಕ್ಕಳಿಗೆ ಬಾಲ್ದಿಗೆ ಚೆಂಡು, 100ಮೀ. ಓಟ, ಮುಟ್ಟಾಂದಿ ಮುಟ್ಟಲೇ ಆಟ ನಡೆಯಿತು.

4 ರಿಂದ 7ನೇ ತರಗತಿ ಮಕ್ಕಳಿಗೆ 200ಮೀ. ಓಟ, ಹಿಮ್ಮುಖ ನಡಿಗೆ, ಬಲೂನು ಒಡೆಯುವುದು, ಮುಟ್ಟಾಂದಿ ಮುಟ್ಟಲೇ ಆಟ ನಡೆಯಿತು.

8 ರಿಂದ 10ನೇ ತರಗತಿ ಮಕ್ಕಳಿಗೆ 3 ಕಾಲಿನ ಓಟ, ಹಾಳೆ ದೋಣಿ ಓಟ, ಉಪ್ಪು ಮೂಟೆ, ಕಂಬಳ (3 ಜನರ ತಂಡ), ಯುವತಿಯರಿಗೆ/ ಮಾತೆಯರಿಗೆ ಮಡಕೆ ಒಡೆಯುವುದು, ನೀರು ತುಂಬಿದ ಕೊಡಪಾನ ಓಟ, ತಪ್ಪಂಗಾಯಿ, ಹಗ್ಗ ಜಗ್ಗಾಟ, ಚೇವುದ ಇರೆಟ್ ನೀರ್ ದಿಂಜಾವುನಿ ಆಟ ನಡೆಯಿತು.

ಸಾರ್ವಜನಿಕ ಪುರುಷರಿಗೆ ಹಗ್ಗ ಜಗ್ಗಾಟ, ಮಡಿಕೆ ಒಡೆಯುವುದು, ತಪ್ಪಂಗಾಯಿ, ಹಾಳೆ ದೋಣಿ ಓಟ, ಕಂಬಳ (3 ಜನರ ತಂಡ), ರಿಲೇ, ಸಾರ್ವಜನಿಕವಾಗಿ ಮುಕ್ತ ನಿಧಿ ಶೋಧ ಕಾರ್ಯಕ್ರಮ ನಡೆಯಿತು.

- Advertisement -

Related news

error: Content is protected !!