- Advertisement -
- Advertisement -


ಕಾಸರಗೋಡು: ಗುಂಡೇಟು ತಗುಲಿ ಸಿಪಿಐ ಮುಖಂಡರೋರ್ವರು ಮೃತಪಟ್ಟ ದಾರುಣ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಪೊಯಿನಾಚಿ ಕರಿಚ್ಚೇರಿಯಲ್ಲಿ ನಡೆದಿದೆ.
ಕರಿಚ್ಚೇರಿ ಯ ಮಾಧವನ್ (65) ಮೃತಪಟ್ಟವರು. ಹಲಸು ಕೊಯ್ಯಲು ಹಿತ್ತಿಲಿಗೆ ತೆರಳಿದ್ದ ಮಾಧವನ್ ರವರು ನೆಲದಲ್ಲಿಟ್ಟಿದ್ದ ಕೋವಿಯನ್ನು ಮೆಟ್ಟಿದಾಗ ಗುಂಡು ಕಾಲಿಗೆ ತಗಲಿದೆ.

ಕಾಡುಹಂದಿಗೆ ಗುರಿ ಇಟ್ಟು ಈ ಕೋವಿಯನ್ನು ಪರಿಸರವಾಸಿಯೊಬ್ಬರು ಹಿತ್ತಿಲಿನಲ್ಲಿ ತಂದಿಟ್ಟಿದ್ದರು ಎನ್ನಲಾಗಿದೆ. ಘಟನೆ ನಡೆದ ಗಂಟೆಗಳ ಬಳಿಕ ಇದು ಮನೆಯವರ ಗಮನಕ್ಕೆ ಬಂದಿದೆ . ಕೂಡಲೇ ಕಾಸರಗೋಡು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ . ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- ಶಿಕ್ಷಕಿ, ಕವಯತ್ರಿ ಮೋಹಿತಾ ಹೊಸ್ಮಠ ರಿಗೆ ರಾಷ್ಟ್ರ ಮಟ್ಟದ ಸಾಹಿತ್ಯ ರತ್ನ ಪ್ರಶಸ್ತಿ
- ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಮತ್ತು ಶ್ರೀ ಉಮಾಮಹೇಶ್ವರ ಸೇವಾ ವಿಶ್ವಸ್ಥ ಮಂಡಳಿ ಇದರ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಭಜನಾ ತರಬೇತಿ ಕಮ್ಮಟ
- ಎಸ್ಐಆರ್ ಅಕ್ರಮದ ವಿರುದ್ಧ ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಪೊಲೀಸರಿಂದ ತಡೆ – 11 ಮೆಟ್ರೋ ನಿಲ್ದಾಣ ಬಂದ್
- ದಸರಾ ರಜೆಯಲ್ಲಿ ವಿಶೇಷ ತರಗತಿ: ಷರತ್ತುಗಳೊಂದಿಗೆ ಅನುಮತಿ ನೀಡಿದ ಶಾಲಾ ಶಿಕ್ಷಣ ಇಲಾಖೆ
- 180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಜೊತೆ ಪ್ರಧಾನಿ ಮೋದಿ ಮಾತುಕತೆ; ಶೀಘ್ರ ಚೇತರಿಕೆಗೆ ಹಾರೈಕೆ



- Advertisement -








