Thursday, October 1, 2026
spot_imgspot_img
spot_imgspot_img

ಗುಂಡ್ಯಡ್ಕ: ಬದ್ರಿಯಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಮದರಸ ವತಿಯಿಂದ ಬೃಹತ್ ಮೀಲಾದ್ ಕಾರ್ಯಕ್ರಮ

- Advertisement -
- Advertisement -

ಗುಂಡ್ಯಡ್ಕ: ಬದ್ರಿಯಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಮದರಸ ಗುಂಡ್ಯಡ್ಕ ವತಿಯಿಂದ ಬೃಹತ್ ಮೀಲಾದ್ ಕಾರ್ಯಕ್ರಮ ಬುಧವಾರ ನಡೆಯಿತು.

ಮಗ್ರೀಬ್ ನಮಾಝಿನ ಬಳಿಕ ಮಕ್ಕಳ ಕಾರ್ಯಕ್ರಮ ಪ್ರಾರಂಭವಾಯಿತು. ಅಲ್ ಹಾದಿ ಸಿದ್ದೀಕ್ ತಂಙಳ್ ತೀರ್ಥಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಸಾದತ್ ತಂಙಳ್ ಉದ್ಘಾಟಿಸಿದರು.

H.I.M. ಗುಂಡ್ಯಡ್ಕ ಸದರ್ ಮುಹಲ್ಲಿಂ ರಫೀಕ್ ಮದನಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣಗೈದರು. ದಕ್ಷಿಣ ಭಾರತದ ಸಮಾಜ ಸೇವಕ ಆಸಿಫ್ ಆಪತ್ಭಾಂದವ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ಅದ್ಯಕ್ಷ ಸಯ್ಯದ್ ಆಲಿ, ಲತೀಫ್ ಸಹದಿ, ಅಬ್ದುಲ್ ರಹಿಮಾನ್ ಹಾಜಿ ಶೇರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಲೀಲ್ ಸಖಾಫಿ ಬರಿಮಾರ್ ಸ್ವಾಗತಿಸಿದರು. ಮಹಮ್ಮದ್ ಗಝ್ಝಾಲಿ ಕುಡ್ತಮುಗೇರು ಕಾರ್ಯಕ್ರಮ ನಿರೂಪಣೆಗೈದರು. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಖ್ ವಿತರಣೆಯೊಂದಿಗೆ ಕಾರ್ಯಕ್ರಮವು ನೆರವೇರಿತು.

- Advertisement -

Related news

error: Content is protected !!