Saturday, August 8, 2026
spot_imgspot_img
spot_imgspot_img

ಟಾನ್ಸಿಲ್ ಶಸ್ತ್ರಚಿಕಿತ್ಸೆಗೊಳಗಾಗಿದ್ದ 27 ವರ್ಷದ ಮಾಜಿ ಮಿಸ್ ಬ್ರೆಜಿಲ್ ಸಾವು

- Advertisement -
- Advertisement -

ಬ್ರೆಜಿಲ್: ತಮ್ಮ ರುಟೀನ್ ಟಾನ್ಸಿಲ್ ಶಸ್ತ್ರಚಿಕಿತ್ಸೆಗೊಳಗಾಗಿದ್ದ 27 ವರ್ಷದ ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ನಿಧನರಾಗಿದ್ದು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ತಮ್ಮ ಟಾನ್ಸಿಲ್ ಗಳನ್ನು ತೆಗೆದುಹಾಕಲು ವಾಡಿಕೆಯಂತೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ತೀವ್ರವಾದ ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ವರದಿಯ ಪ್ರಕಾರ, 2018 ರಲ್ಲಿ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಬ್ರೆಜಿಲ್ ಕಿರೀಟವನ್ನು ಪಡೆದ ಮಿಸ್ ಕೊರಿಯಾ ಅವರು ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಎರಡು ತಿಂಗಳಿಂದ ಅವರು ಕೋಮಾ ಸ್ಥಿತಿಯಲ್ಲಿದ್ದು ಟಾನ್ಸಿಲ್‌ಗಳನ್ನು ತೆಗೆದುಹಾಕಲು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಕೆಲವು ದಿನಗಳ ನಂತರ ಮೆದುಳಿನಲ್ಲಿ ಭಾರೀ ರಕ್ತಸ್ರಾವವಾಗಿತ್ತು , ಅಲ್ಲದೆ ಏಪ್ರಿಲ್ 4 ರಂದು ಹೃದಯಾಘಾತವಾಗಿತ್ತು.

ಮಿಸ್ ಕೊರಿಯಾ ಅವರು ಮಾಡೆಲ್, ಬ್ಯೂಟಿಷಿಯನ್ , ಇನ್ ಪ್ಲೋಯೆನ್ಸರ್ ಆಗಿದ್ದು ,ಇನ್ಸ್ಟಾಗ್ರಾಂ ನಲ್ಲಿ 56,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು.

- Advertisement -

Related news

error: Content is protected !!