Friday, August 19, 2022
spot_imgspot_img
spot_imgspot_img

ಠಾಣೆಗೆ ನುಗ್ಗಿದ ತಂಡದಿಂದ ಪೊಲೀಸ್ ಸಿಬ್ಬಂದಿಗೆ ಥಳಿತ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

- Advertisement -G L Acharya G L Acharya
- Advertisement -

ದೆಹಲಿಯ ಪೊಲೀಸ್ ಠಾಣೆಯೊಂದಕ್ಕೆ ನುಗ್ಗಿದ ತಂಡವೊಂದು ಪೊಲೀಸ್ ಸಿಬ್ಬಂದಿಯನ್ನು ನಿರ್ದಯವಾಗಿ ಥಳಿಸಿರುವ ಆಘಾತಕಾರಿ ಘಟನೆಯ ವಿಡಿಯೋ ವೈರಲ್ ಆಗಿದೆ.

ನವದೆಹಲಿಯ ಆನಂದ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋವನ್ನು ಮತ್ತೊರ್ವ ಪೊಲೀಸ್ ಸಿಬ್ಬಂದಿ ಚಿತ್ರೀಕರಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೃಶ್ಯದಲ್ಲಿ 10-12 ಜನರ ತಂದ ಪೊಲೀಸರನ್ನು ಸುತ್ತುವರೆದು ಹಲ್ಲೆ ನಡೆಸಿದ್ದಾರೆ. ತಂಡದಲ್ಲಿದ್ದ ಜನ ತಮ್ಮ ಫೋನ್‌ಗಳಲ್ಲಿ ಚಿತ್ರಗಳು ಮತ್ತು ವೀಡಿಯೊಗಳನ್ನು ಚಿತ್ರೀಕರಿಸುವುದನ್ನು ನೋಡಬಹುದಾದರೂ, ಯಾರೂ ಪೊಲೀಸ್ ಸಿಬ್ಬಂದಿಯನ್ನು ತಡೆಯಲು ಪ್ರಯತ್ನಿಸುವುದಿಲ್ಲ.

ಕಾನ್‌ಸ್ಟೆಬಲ್ ಕ್ಷಮೆಯಾಚಿಸುತ್ತಿದ್ದರು, ಬಿಡದೆ ಥಳಿಸಿದ್ದು, ಯಾವ ಕಾರಣಕ್ಕೆ ಈ ಗುಂಪು ಪೊಲೀಸಿಗೆ ಹಲ್ಲೆ ಮಾಡಿದೆ ಎಂಬುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಈ ಘಟನೆ ಆಗಸ್ಟ್ 3 ರಂದು ನಡೆದಿದ್ದು, ಆರೋಪಿಗಳನ್ನು ಹಿಡಿಯಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!