Tuesday, June 30, 2026
spot_imgspot_img
spot_imgspot_img

ದಫನ ಮಾಡಿದ ವ್ಯಕ್ತಿಯ ಮೃತದೇಹವನ್ನು ಮತ್ತೆ ಹೊರತೆಗೆಯುವ ಸಾಧ್ಯತೆ!

- Advertisement -
- Advertisement -

ಬೆಳಗಾವಿ: ಅರ್ಬಾಝ್ ಎಂಬ ವ್ಯಕ್ತಿಯ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಡಿಎನ್ ಎ ಪರೀಕ್ಷೆಗಾಗಿ ಮೃತದೇಹವನ್ನು ಹೊರತೆಗೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಅರ್ಬಾಝ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಶ್ರೀ ರಾಮ ಸೇನೆ ಕಾರ್ಯಕರ್ತರ ಸಹಿತ 10 ಮಂದಿ ಆರೋಪಿಗಳನ್ನು ಈ ಪ್ರಕರಣದಲ್ಲಿ ಹೆಸರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಮೃತದೇಹದ ಡಿಎನ್ಎ ಪರೀಕ್ಷೆ ನಡೆಯಲಿದೆ. ಅವರಿಗೂ ಈ ಹತ್ಯೆಗೂ ಸಂಬಂಧವಿದೆ ಎಂಬುದನ್ನು ದೃಢೀಕರಿಸಲು ಡಿಎನ್‍ಎ ಪರೀಕ್ಷೆ ಸಹಾಯಕವಾಗಲಿದೆ ಎನ್ನಲಾಗಿದೆ.

ಅರ್ಬಾಝ್‍ನ ಮೃತದೇಹ ಖಾನಾಪುರ ಸಮೀಪದ ರೈಲ್ವೆ ಹಳಿಯಲ್ಲಿ ಸೆ. 28ರಂದು ಪತ್ತೆಯಾಗಿದ್ದು, ಮರುದಿನವೇ ಆತನ ದಫನ ಕಾರ್ಯವು ಖಾನಾಪುರ ದಫನಭೂಮಿಯಲ್ಲಿ ನಡೆದಿತ್ತು. ಅರ್ಬಾಝ್ ಶವ ಯಾವಾಗ ಹೊರತೆಗೆಯಲಾಗುವುದೆಂಬುದು ಖಚಿತವಾಗಿಲ್ಲವಾದರೂ ಸದ್ಯದಲ್ಲಿಯೇ ಪ್ರಕ್ರಿಯೆಯು ಕಂದಾಯ ಇಲಾಖೆ ಸಹಾಯಕ ಆಯುಕ್ತರ ಉಸ್ತುವಾರಿಯಲ್ಲಿ ನಡೆಯಲಿದೆ.

- Advertisement -

Related news

error: Content is protected !!