Monday, June 22, 2026
spot_imgspot_img
spot_imgspot_img

ಪಡಿಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ

- Advertisement -
- Advertisement -

ಮಕ್ಕಳೆಲ್ಲರೂ ದೇಶದ ಆಸ್ತಿಗಳಾಗಿ ಬೆಳೆಯಬೇಕು ಎಂದು ಪಡಿಬಾಗಿಲು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಕಾರಂತ್ ರವರು ಹೇಳಿದರು. ಮಕ್ಕಳ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡಿಬಾಗಿಲು ಇಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಟನೇ ತರಗತಿಯ ಆಯಿಶತ್ ಶಫೀಖ ವಹಿಸಿದಳು. ಮುಖ್ಯ ಶಿಕ್ಷಕಿ ಶಶಿಕಲಾ ಸಲಹೆ ಸೂಚನೆ ನೀಡಿದರು ಅಭಿವೃದ್ಧಿ ಸಮಿತಿಯ ಸದಸ್ಯರು ಶಿಕ್ಷಕರು ಪೋಷಕರು ಉಪಸ್ಥಿತರಿದ್ದರು.

ಖತೀಜತ್ ಫರಾನ ಸ್ವಾಗತಿಸಿದಳು. ಧನುಶ್ರೀ ಧನ್ಯವಾದ ಸಮರ್ಪಿಸಿದಳು. ಧನ್ವಿತಾ ಕಾರಂತ್ ಕಾರ್ಯಕ್ರಮ ನಿರೂಪಿಸಿದಳು.

ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಪಡಿಬಾಗಿಲು ಶಾಲೆಯಲ್ಲಿ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಯಿತು. ಮಕ್ಕಳು ಬಲೂನುಗಳನ್ನು ಹಿಡಿದು ಶಾಲಾ ಬಯಲಿನಲ್ಲಿ ಸಂಭ್ರಮಿಸಿದರು. ತಮ್ಮನ್ನು ರೂಪಿಸಿದ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

- Advertisement -

Related news

error: Content is protected !!