Friday, October 2, 2026
spot_imgspot_img
spot_imgspot_img

ಪುತ್ತೂರು: ತೋಟದ ಕೆಲಸಕ್ಕೆ ಬರುತ್ತಿದ್ದ ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿದ ಪ್ರಕರಣ; ಆರೋಪಿಯ ವಿರುದ್ಧ ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ದೂರು..!

- Advertisement -
- Advertisement -
driving

ಪುತ್ತೂರು: ಅಪ್ರಾಪ್ತ ಬಾಲಕಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ.

ಈ ಬಗ್ಗೆ ಅಪ್ರಾಪ್ತ ಬಾಲಕಿಯು ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ದೂರು ನೀಡಿದ್ದು, ದೂರಿನಲ್ಲಿ “ನಾನು ಕಳೆದ ಒಂದು ವರ್ಷ ಮೂರು ತಿಂಗಳಿನಿಂದ ಕುದ್ಕಾಡಿ ನಾರಾಯಣ ರೈ ಎಂಬವರ ತೋಟದ ಕೆಲಸಕ್ಕೆ ತೆರಳುತ್ತಿದ್ದು, ಕೆಲಸಕ್ಕೆ ಸೇರಿದ ಎರಡು ತಿಂಗಳ ನಂತರ ಅವರು ನನ್ನಲ್ಲಿ ಅನೈತಿಕ ಸಂಬಂಧದ ಬಗ್ಗೆ ಮಾತಾನಾಡಿದ್ದು, ನಾನು ನಿರಾಕರಿಸಿ ಈ ಬಗ್ಗೆ ಮನೆಯವರಿಗೆ ತಿಳಿಸುವುದಾಗಿ ಹೇಳಿದಾಗ ನೀನು ಮನೆಯವರಿಗೆ ತಿಳಿಸಿದರೆ ನಿನ್ನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ”.

“ನಾನು ಒಪ್ಪದಿದ್ದಾಗ ಬಲವಂತವಾಗಿ ನನ್ನನ್ನು ಅವರ ತೋಟದಲ್ಲಿ ಬಲತ್ಕಾರ ಮಾಡಿ, ನಂತರ ಈ ವಿಷಯವನ್ನು ಯಾರಿಗೂ ಹೇಳದಂತೆ ಕೊರಗಜ್ಜನ ಪ್ರಮಾಣವನ್ನು ಮಾಡಿಸಿಕೊಂಡಿದ್ದು, ಪ್ರತಿ ದಿನ ನನ್ನ ಮೇಲೆ ಅತ್ಯಾಚಾರ ವೆಸಗುತ್ತಿದ್ದು, 4 ತಿಂಗಳ ಗರ್ಭವತಿಯಾದ ನಂತರವೂ ಬೆದರಿಸಿ ದಿನಂಪ್ರತಿ ಅತ್ಯಾಚಾರ ಮಾಡಿರುತ್ತಾರೆ. ಅಷ್ಟೇ ಅಲ್ಲದೇ ನನಗೆ ಒತ್ತಾಯ ಪೂರ್ವಕವಾಗಿ ಮೊಬೈಲ್ ಫೋನ್ ಅನ್ನು ತೆಗೆದು ಕೊಟ್ಟಿದ್ದು, ನಾನು ಒಂದು ತಿಂಗಳ ಗರ್ಭವತಿಯಾದಗಲೇ ಈ ವಿಷಯವನ್ನು ಅವರಲ್ಲಿ ಹೇಳಿದ್ದು, ಮರುದಿನ ಮಾತ್ರೆ ತಂದುಕೊಟ್ಟಿದ್ದು, ಆದರೇ ನಾನು ಆ ಮಾತ್ರೆಯನ್ನು ತೆಗೆದುಕೊಂಡಿಲ್ಲ. 4 ತಿಂಗಳ ಗರ್ಭಿಣಿಯಾದ ನಂತರ ಕೆಲಸಕ್ಕೆ ಹೋಗಲು ಆಗದೇ ಮನೆಯಲ್ಲೇ ಇದ್ದೆ, ಆಗ ನಾರಾಯಣ ರೈ ಯವರು ಪದೇ ಪದೇ ಫೋನ್ ಮಾಡಿ ಬರಲು ಹೇಳುತ್ತಿದ್ದರು. ನಾನು ಹೋಗದೇ ಇದ್ದಾಗ ನನಗೆ ಬಯ್ಯುತ್ತಿದ್ದರು”.

ಈ ಬಗ್ಗೆ ನಾನು ಈಗಾಗಲೇ ದೂರು ನೀಡಿದ್ದು, ಆದರೇ ಪೊಲೀಸರು ಈ ಪ್ರಕರಣವನ್ನು ತಿರುಚಿವ ಪ್ರಯತ್ನವನ್ನು ಮಾಡುತ್ತಿದ್ದು, ನನ್ನ ಅಣ್ಣನ ಮೇಲೆ ಈ ಪ್ರಕರಣವನ್ನು ಕಟ್ಟಿ ನಾರಾಯಣ ರೈ ಯವರನ್ನು ಈ ಪ್ರಕರಣದಿಂದ ದೂರವಿಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷರು ದೂರನ್ನು ಸ್ವೀಕರಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!