Sunday, October 18, 2026
spot_imgspot_img
spot_imgspot_img

ಪುತ್ತೂರು: ಬ್ರಹ್ಮರಥೋತ್ಸವದಂದು ಮಕ್ಕಳ ಚಿಕಿತ್ಸಾ ವೆಚ್ಚಕ್ಕಾಗಿ ಹಮ್ಮಿಕೊಂಡಿದ್ದ ಸೇವಾಯಜ್ಞದಲ್ಲಿ ಸಂಗ್ರಹವಾದ ಹಣ ಫಲಾನುಭವಿಗಳಿಗೆ ಹಸ್ತಾಂತರ

- Advertisement -
- Advertisement -

ಪುತ್ತೂರು: ಯುವಶಕ್ತಿ ಕಡೇಶಿವಾಲಯ(ರಿ), ಯುವಸ್ಪಂದನ ಪೆರ್ನೆ, ಯುವಕೇಸರಿ ಗಡಿಯಾರ ನೇತೃದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವದಂದು ಬೃಹತ್ ಹನುಮಂತನ ವೇಷದೊಂದಿಗೆ ನಡೆದ 4 ಮಕ್ಕಳ ಚಿಕಿತ್ಸಾ ವೆಚ್ಚಕ್ಕಾಗಿ ಹಮ್ಮಿಕೊಂಡಿದ್ದ ಸೇವಾಯಜ್ಞದಲ್ಲಿ ಒಟ್ಟು ಸಂಗ್ರಹವಾಗಿದ್ದ ಮೊತ್ತವನ್ನು ನಿನ್ನೆ ಫಲಾನುಭವಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಧಾರ್ಮಿಕ ಸಾಮಾಜಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ಹಿಂದೂ ಜಾಗರಣ ವೇದಿಕೆ ವಿಟ್ಲ ಅಧ್ಯಕ್ಷ ಗಣೇಶ್ ಕೆದಿಲ, ಕಡೇಶಿವಾಲಯ ಗ್ರಾ.ಪಂ ಅಧ್ಯಕ್ಷ ಸುರೇಶ್ ಬನಾರಿ, ಹನುಮ ವೇಷಧಾರಿಗಳಾದ ಭಾಸ್ಕರ ಮುಂಡಾಲ, ಚಂದ್ರಶೇಖರ ಅಮೈ, ಸಾಮಾಜಿಕ ಮುಂದಾಳು ಕಿರಣ್ ಶೆಟ್ಟಿ ಪೆರ್ನೆ ಹಾಗೂ ವಿದ್ಯಾಧರ ರೈ ಅಮೈ, ಶ್ರೀರಾಮ್ ನಾಸಿಕ್ ಬ್ಯಾಂಡ್ ನ ಕಾರ್ಯಕರ್ತರು ಹಾಗೂ ಸಂಘಟನೆಗಳ ಎಲ್ಲಾ ಪ್ರಮುಖರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಒಟ್ಟು ಸಂಗ್ರಹವಾದ ರೂ. 2,70,000 ವನ್ನು ಸಮಾನಾಗಿ ನಾಲ್ಕು ಫಲಾನುಭವಿಗಳಿಗೆ ನೀಡಲಾಯಿತು.

- Advertisement -

Related news

error: Content is protected !!