Thursday, February 2, 2023
spot_imgspot_img
spot_imgspot_img

ಪುತ್ತೂರು: ಶಬರಿಮಲೆ ಯಾತ್ರೆ ಕೈಗೊಂಡಿದ್ದ ವ್ಯಕ್ತಿ ಮೃತ್ಯು

- Advertisement -G L Acharya G L Acharya
vtv vitla
- Advertisement -

ಪುತ್ತೂರು: ಶಬರಿಮಲೆ ಯಾತ್ರೆ ಕೈಗೊಂಡಿದ್ದ ಕೆಯ್ಯೂರು ಗ್ರಾಮದ ದೇರ್ಲ ಕೃಷ್ಣಪ್ಪ ನಾಯ್ಕರವರ ಪುತ್ರ ಗಂಗಾಧರ್ ಡಿ ಕ್ಯಾಲಿಕೇಟ್‌ನ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಗಂಗಾಧರ್ ದೇರ್ಲರವರು ಬೆಳ್ಳಾರೆಯಿಂದ ಬೆಂಗಳೂರಿನ ಸಹೋದ್ಯೋಗಿಗಳೊಂದಿಗೆ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಶಬರಿಮಲೆಯ ಎಲಿಮಲೆಗೆ ತಲುಪಿ ಅಲ್ಲಿ ನದಿ ನೀರಿನಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ಗಂಗಾಧರ್‌ ತನ್ನ ಬಳಗದಿಂದ ತಪ್ಪಿಸಿಕೊಂಡಿದ್ದರು ಎನ್ನಲಾಗಿದೆ.

ಈ ವೇಳೆ ಅಲ್ಲಿನ ಪೊಲೀಸರಿಗೆ ಇವರ ಜೊತೆಗಿದ್ದವರು ದೂರು ನೀಡಿದ್ದರು. ಸಂಜೆ ವೇಳೆಗೆ ಪೊಲೀಸರು ಗಂಗಾಧರ್‌ರವರನ್ನು ಹುಡುಕಿ ಬಳಗಕ್ಕೆ ಒಪ್ಪಿಸಿದರು. ಆದರೆ ಆ ಬಳಿಕ ಗಂಗಾಧರ್‌ರವರು ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಕೋಯಿಕ್ಕೋಡ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗಂಗಾಧರ್‌ವರು ನಿಧನ ಹೊಂದಿದ್ದಾರೆ.

ಮೃತರು ತಾಯಿ ಗಿರಿಜಾ, ಪತ್ನಿ ಉಷಾ, ಪುತ್ರಿಯರಾದ ಹರ್ಷಿತಾ, ಲಿಖಿತಾರವರನ್ನು ಅಗಲಿದ್ದಾರೆ.

- Advertisement -

Related news

error: Content is protected !!