Wednesday, June 17, 2026
spot_imgspot_img
spot_imgspot_img

‘ಪುನೀತ ಮಾಲೆ’ ಹಾಕುವವರ ವಿರುದ್ಧ ಒಳ್ಳೆ ಹುಡುಗ ಪ್ರಥಮ್ ಕಿಡಿ…!!

- Advertisement -
- Advertisement -

ಹೊಸಪೇಟೆಯ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಯ್ಯಪ್ಪ ಸ್ವಾಮಿ ಮಾದರಿಯಲ್ಲಿಯೇ ಮಾರ್ಚ್ 1ರಿಂದ 17ರವರೆಗೆ ಮಾಲೆ ಧರಿಸಿ ಪುನೀತ್ ರಾಜ್‌ಕುಮಾರ್ ಫೋಟೊ ಇಟ್ಟು ಪೂಜೆ ಸಲ್ಲಿಸಲು ಯೋಜನೆ ಹಾಕಿಕೊಂಡಿದಕ್ಕೆ ಪ್ರಥಮ್ ವಿರೋಧ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಥಮ್ ಪುನೀತ್ ರಾಜ್‌ಕುಮಾರ್ ಧರಿಸುವ ಮಾಲೆ ಯೋಜನೆ ಹಾಕಿದವರ ವಿರುದ್ಧ ಕಿಡಿಕಾರಿದ್ದಾರೆ. ಸದ್ಯ ಪ್ರಥಮ್ ಮಾಡಿರುವ ಈ ಟ್ವೀಟ್‌ಗೂ ಸಹ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ಪ್ರಥಮ್ ಹೇಳಿದ್ದು ಸರಿ ಎಂದರೆ, ಇನ್ನೂ ಕೆಲವರು ಅವರವರ ಇಷ್ಟ ಹಾಗೂ ಆಚರಣೆಗಳನ್ನು ಪ್ರಶ್ನಿಸುವುದು, ತಪ್ಪು ಎನ್ನುವ ಹಕ್ಕು ಯಾರಿಗೂ ಇಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ರಾಜ್ಯದಲ್ಲಿನ ಅಪ್ಪು ಅಭಿಮಾನಿಗಳು ಈ ರೀತಿ ಮಾಲೆ ಹಾಕಿಕೊಳ್ಳಬಹುದು ಎಂದು ಹಲವು ನಿಯಮಗಳನ್ನೂ ಸಹ ಪ್ರಕಟಿಸಿದ್ದರು. ಇಷ್ಟು ದಿನಗಳ ಕಾಲ ಅಪ್ಪು ಬಾಸ್ ಎನ್ನುತ್ತಿದ್ದ ಪ್ರಥಮ್ ಈಗ ಈ ರೀತಿ ವಿರೋಧ ವ್ಯಕ್ತಪಡಿಸಲು ಕಾರಣವೂ ಸಹ ಇದೆ.

“ದೇವರ ಮೇಲೆ ಭಕ್ತಿ ಇರಲಿ” ಕಲಾವಿದರ ಮೇಲೆ ಪ್ರೀತಿ,ಅಭಿಮಾನವಿರಲಿ…! ಶಬರಿಮಲೆಗೆ ಹೋಗೋದು ಅಯ್ಯಪ್ಪನಲ್ಲಿ ಶರಣಾಗೋಕೆ…! ಬಹಳ ಶಿಸ್ತುವಿನಿಂದ ಶ್ರದ್ಧಾಭಕ್ತಿಗಳು ಮಾಲೆ ಧಾರಣೆ ಮಾಡಬೇಕು…! ಕಲಾವಿದರನ್ನು ಕಲಾವಿದರಾಗಿರೋಕ್ಕೆ ಬಿಡಿ! ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು! ದೇವರು-ದೇವರೇ…ಕಲಾವಿದರು-ಕಲಾವಿದರೇ!” ಎಂದು ಟ್ವೀಟ್ ಮಾಡಿದ್ದಾರೆ.

- Advertisement -

Related news

error: Content is protected !!