- Advertisement -
- Advertisement -


ಪ್ರವಾಸಕ್ಕೆಂದು ಬೆಂಗಳೂರಿನ ಬಂದಿದ್ದ 87 ವಿದ್ಯಾರ್ಥಿಗಳ ಪೈಕಿ ನಾಲ್ವರು ನೀರುಪಾಲಾಗಿದ್ದು, ಅವರಲ್ಲಿ ಇಬ್ಬರ ಶವ ಪತ್ತೆಯಾಗಿದ್ದರೆ, ಇನ್ನಿಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಈ ದುರಂತ ಸಂಭವಿಸದೆ.
ಕುಮಟಾ ತಾಲೂಕಿನ ಬಾಡ ಗ್ರಾಮದಲ್ಲಿ ಸಮುದ್ರತೀರದಲ್ಲಿ ಈ ಅವಘಡ ನಡೆದಿದೆ. ಕುಮಟಾದ ಸಿಲ್ವರ್ ಸ್ಯಾಂಡ್ ರೆಸಾರ್ಟ್‌ಗೆ ಬಂದಿದ್ದ ಈ ವಿದ್ಯಾರ್ಥಿಗಳು ಇಲ್ಲಿ ಸಮುದ್ರಕ್ಕಿಳಿದು ಮೋಜು ಮಸ್ತಿ ಮಾಡುತ್ತಿದ್ದರು. ಆಗ ಬೆಂಗಳೂರು ಮೂಲದ ಅರ್ಜುನ್, ಚೈತ್ರಶ್ರೀ, ತೇಜಸ್ ಡಿ., ಕಿರಣ್ ಕುಮಾರ್ ನೀರುಪಾಲಾಗಿದ್ದು, ಆ ಪೈಕಿ ಅರ್ಜುನ್, ಚೈತ್ರಶ್ರೀ ಶವ ಪತ್ತೆಯಾಗಿದೆ. ನಾಪತ್ತೆ ಆಗಿರುವ ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ.

ಸ್ಥಳಕ್ಕೆ ಕುಮಟಾ ಪೊಲೀಸರು ದೌಡಾಯಿಸಿದ್ದು, ನಾಪತ್ತೆ ಆದವರಿಗಾಗಿ ಅಗ್ನಿಶಾಮಕ ದಳ ಪೊಲೀಸರು ಹಾಗೂ ಸ್ಥಳೀಯರಿಂದ ಶೋಧ ಕಾರ್ಯ ನಡೆಯುತ್ತಿದೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.


- ಮನೆಯಲ್ಲೇ ಕುಳಿತು SIR ಸ್ಟೇಟಸ್ ಚೆಕ್ ಮಾಡಿ: ಚುನಾವಣಾ ಆಯೋಗದಿಂದ ಹೊಸ ವೆಬ್ಸೈಟ್
- ಆ.13ರಿಂದ ಆ.27ರ ವರೆಗೆ ವಿಧಾನಸೌಧ ಸುತ್ತಲೂ ನಿಷೇಧಾಜ್ಞೆ ಜಾರಿ
- ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ‘ಭಾರತ್ ಜೋಡೋ ಯುವ ಸಂಘ’ ರಚನೆಗೆ ಪೂರ್ವಭಾವಿ ಸಭೆ: 4 ಸಂಘಗಳ ಸ್ಥಾಪನೆಗೆ ಸಿದ್ಧತೆ
- ದ.ಕ.ದಲ್ಲಿ ಭಾರೀ ಮಳೆ ಎಚ್ಚರಿಕೆ: ಆ.8ರಂದು ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ಶಾಲೆ-ಕಾಲೇಜುಗಳಿಗೆ ರಜೆ
- ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಪ್ರಕರಣ-ಘಟನೆಯಾದ 3 ದಿನಗಳೊಳಗಾಗಿ ಪ್ರಕರಣ ಭೇದಿಸಿ,ಆರೋಪಿಗಳ ಬಂಧನ

- Advertisement -








