Thursday, June 24, 2021
spot_imgspot_img
spot_imgspot_img

ಪ್ರೀತಿಗಾಗಿ ಪ್ರಿಯತಮೆಯನ್ನು 10 ವರ್ಷ ರೂಮಿನಲ್ಲಿ ಬಚ್ಚಿಟ್ಟ ವಿಚಿತ್ರ ಪ್ರೇಮಿ…!

- Advertisement -
- Advertisement -

ಕೇರಳ: ಪ್ರೇಮಿ ತನ್ನ ಪ್ರಿಯತಮೆಯನ್ನು 10 ವರ್ಷಗಳ ಕಾಲ ತನ್ನ ಮನೆಯ ಸಣ್ಣ ಕೋಣೆಯಲ್ಲಿ ಬಂಧಿಯಾಗಿಸಿ, ಇದೀಗ 10 ವರ್ಷಗಳ ಬಳಿಕ ಮಗಳು ಪಕ್ಕದ ಮನೆಯಲ್ಲೇ ಪತ್ತೆಯಾಗಿರುವುದರಿಂದ ಪೋಷಕರು ಶಾಕ್ ಆಗಿರುವ ಘಟನೆ ಕೇರಳದ ಪಾಲಕ್ಕಾಡಿನಲ್ಲಿ ನಡೆದಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಯಲೂರಿನ ನಿವಾಸಿಯಾಗಿರು 18 ವರ್ಷದ ಸಂಜಿತಾ ತನ್ನ ಮನೆ ಪಕ್ಕದ ರೆಹಮಾನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಪ್ರೀತಿಯ ವಿಚಾರ ಮನೆಯಲ್ಲಿ ತಿಳಿದ್ರೆ ಮದುವೆಗೆ ವಿರೋಧ ಮಾಡುತ್ತಾರೆ ಅಂತ ಭಾವಿಸಿದ ಪ್ರೇಮಿಗಳು ಹೇಗಾದ್ರೂ ಮಾಡಿ ಒಂದಾಗಲೇ ಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ರು.

ಸುಮಾರು 10 ವರ್ಷದ ಹಿಂದೆ ಸಂಜಿತಾ ಒಂದು ದಿನ ನಾಪತ್ತೆಯಾಗಿದ್ಲು. ಮನೆ ಮಂದಿಯೆಲ್ಲಾ ಎಲ್ಲಾ ಕಡೆ ಹುಡುಕಾಡಿದ್ರು ಸಂಜಿತಾ ಮಾತ್ರ ಪತ್ತೆಯಾಗಲೇ ಇಲ್ಲ. ಕೊನೆಗೆ ಪೋಷಕರು ಆಕೆ ಯಾರ ಜೊತೆಗಾದ್ರೂ ಓಡಿ ಹೋಗಿರಬಹುದು ಅಂತಾ ಬಾವಿಸಿ ಸುಮ್ಮನಾಗಿದ್ರು. ಆದರೆ ಸಂಜಿತಾ ರೆಹಮಾನ್ ನನ್ನು ಪ್ರೀತಿಸುತ್ತಿರೋ ವಿಚಾರ ಗೊತ್ತೇ ಇರಲಿಲ್ಲ.

ಆದ್ರೆ ಸಂಜಿತಾ ಆಕೆಯ ಮನೆ ಪಕ್ಕದಲ್ಲಿರೋ ರೆಹಮಾನ್ ಮನೆಯ ಸಣ್ಣ ಕೋಣೆಯಲ್ಲಿ ಬಂಧಿಯಾಗಿದ್ಲು. ಪ್ರೀತಿಯ ಪ್ರಿಯತಮೆ ಯನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ರೆಹಮಾನ್ ಆಕೆಯನ್ನು ತಾನು ವಾಸಿಸುತ್ತಿದ್ಗ ಮನೆಯಲ್ಲಿಯೇ ಬಂಧಿಯಾಗಿಸಿದ. ಬೆಳಗೆದ್ದು ಪೈಂಟರ್ ಕೆಲಸಕ್ಕೆ ತೆರಳುತ್ತಿದ್ದ ರೆಹಮಾನ್ ಸಂಜೆ ಮನೆಗೆ ವಾಪಾಸಾಗುತ್ತಿದ್ದ.

ಮನೆಯಲ್ಲಿ ರೆಹಮಾನ್ ತಾಯಿ ಹಾಗೂ ಅಣ್ಣ ಅದೇ ಮನೆಯಲ್ಲಿ ಸಂಜಿತಾ ಇರೋ ವಿಚಾರ ಗೊತ್ತೇ ಇರಲಿಲ್ಲ. ರೆಹಮಾನ್ ಸಿಡುಕು ಸ್ವಭಾವದವನಾಗಿರೋ ಕಾರಣಕ್ಕೆ ಯಾರೂ ಕೂಡ ಆತನ ರೂಮ್ ಗೆ ಹೋಗುತ್ತಲೇ ಇರಲಿಲ್ಲ. ನಿತ್ಯವೂ ಕೆಲಸಕ್ಕೆ ಹೋಗುವಾಗ ರೂಮ್ ಲಾಕ್ ಮಾಡಿಕೊಂಡು ಹೋಗುತ್ತಿದ್ದ.

ತಾಯಿ ಹಾಗೂ ಅಣ್ಣ ಕೆಲಸಕ್ಕೆ ಹೋದ್ರೆ ಸಂಜೆಯೇ ಮನೆಗೆ ಬರೋದು. ಹೀಗಾಗಿ ಸಂಜಿತಾ ಕಿಟಕಿ ಸರಿಸಿ ಮನೆಯೊಳಗೆ ಬಂದು ತನ್ನ ನಿತ್ಯ ಕರ್ಮಗಳನ್ನು ಪೂರೈಸುತ್ತಿದ್ದಳು, ಸುಮಾರು 10 ವರ್ಷಗಳ ಕಾಲ ಇಬ್ಬರ ಪ್ರಣಯ ಸಣ್ಣ ರೂಮಿನಲ್ಲಿಯೇ ನಡೆಯುತ್ತಿ ದ್ದರೂ ಕೂಡ ಲೋಕದ ಕಣ್ಣಿಗೆ ಕಾಣಿಸಲೇ ಇಲ್ಲವಾಗಿತ್ತು. ಇನ್ನು ಸಂಜಿತಾ ತನ್ನ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ರೋ ರೆಹಮಾನ್ ಮನೆಯಲ್ಲಿರೋ ಇರೋ ವಿಷಯ ಗೊತ್ತೇ ಆಗಿರಲಿಲ್ಲ. ಇದೀಗ ಸಂಜಿತಾಗೆ 29 ವರ್ಷವಾದ್ರೆ ರೆಹಮಾನ್ ಗೆ 34 ವರ್ಷ.

ಕಳೆದ ಮೂರು ತಿಂಗಳಿನಿಂದ ರೆಹಮಾನ್ ನಾಪತ್ತೆಯಾಗಿದ್ದ. ಈ ಕುರಿತು ರೆಹಮಾನ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರೆಹಮಾನ್ ಹುಡುಕೋದಕ್ಕೆ ಹೊರಟಾಗ ರೆಹಮಾನ್ ಜೊತೆ ಸಂಜಿತಾ ಪತ್ತೆಯಾಗಿದ್ದಳು. ಸಂಜಿತಾ ನೋಡಿದ ಪೋಷಕರಿಗೆ ಅರೆ ಕ್ಷಣ ಶಾಕ್ ಆಗಿತ್ತು. ಪ್ರೇಮಿಗಳು ಪೊಲೀಸರ ಮುಂದೆ ತಮ್ಮ ಅಪರೂಪದ ಪ್ರೇಮ ಕಥೆಯನ್ನು ಹೇಳಿದ್ದಾರೆ.

ಇದೀಗ ಪೊಲೀಸರು ಇಬ್ಬರನ್ನೂ ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸಿದ್ದಾರೆ. 10 ವರ್ಷಗಳ ಕಾಲ ನಡೆದ ವಿಚಾರಗಳನ್ನು ನ್ಯಾಯಾಧೀಶರ ಮುಂದೆ ತಿಳಿಸಿರುವ ಸಂಜಿತಾ ತಾನು ರೆಹಮಾನ್ ನನ್ನು ಮದುವೆಯಾಗಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾಳೆ. ಈ ವಿಷಯ ಕೇಳಿತ್ತಿದ್ದಂತೆಯೇ ನ್ಯಾಯಾಲಯದಲ್ಲಿದ್ದವರಿಗೇ ಶಾಕ್ ಆಗಿತ್ತು. 11 ವರ್ಷಗಳ ಕಾಲ ಕೊಠಡಿಯನ್ನೇ ಪ್ರಪಂಚವನ್ನಾಗಿಸಿಕೊಂಡು ಬದುಕುತ್ತಿದ್ದ ಸಂಜಿತಾ ಪ್ರೀತಿ ಕಂಡು ನಿಬ್ಬೆರಗಾಗಿದ್ದಾರೆ.

- Advertisement -
- Advertisement -

MOST POPULAR

HOT NEWS

Related news

error: Content is protected !!