Saturday, August 8, 2026
spot_imgspot_img
spot_imgspot_img

ಪ್ರೀತಿ ನಿರಾಕರಿಸಿದ ಕಾಲೇಜು ವಿದ್ಯಾರ್ಥಿನಿಯನ್ನು ನಡುರಸ್ತೆಯಲ್ಲೇ ಚಾಕು ಇರಿದು ಕೊಲೆಗೈದ ಪಾಗಲ್ ಪ್ರೇಮಿ

- Advertisement -
- Advertisement -

ಮಹಾರಾಷ್ಟ್ರ: ಕಾಲೇಜು ವಿದ್ಯಾರ್ಥಿನಿಯನ್ನು ನಡುರಸ್ತೆಯಲ್ಲಿ ಚಾಕು ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನ ಕಾಲೇಜು ಬಳಿ ನಡೆದಿದೆ.

20 ವರ್ಷದ ಕಾಶಿಶ್ ಪ್ರೀತ್ ಪಾಲ್ಸಿಂಗ್ ಎಂಬಾಕೆಯನ್ನು ಚಾಕುವಿನಿಂದ ಇರಿದು ಶರಣ್ ಸಿಂಗ್ ಸೇಥಿ ಎಂಬಾತ ಹತ್ಯೆ ಮಾಡಿದ್ದಾನೆ.

vtv vitla
vtv vitla

ಆತ ಹುಡುಗಿಯ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ. ಆದರೆ ಯುವತಿ ಪ್ರೀತಿ ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಆತ ಕಾಲೇಜು ಬಳಿ ಕಾದು ಆಕೆ ಹೊರಬರುತ್ತಿದ್ದಂತೆ ಚಾಕು ಇರಿದಿದ್ದಾನೆ. ಚಾಕು ಇರಿದು ನನ್ನನ್ನು ಏಕೆ ಪ್ರೀತಿಸುತ್ತಿಲ್ಲ ಎಂದು ಕ್ರೂರವಾಗಿ ವರ್ತಿಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ನಾಸಿಕ್ ಆತನ ಸಹೋದರಿಯ ಮನೆಯಲ್ಲಿ ಅಡಗಿ ಕುಳಿತ ವಿಷಯ ತಿಳಿದು ಪೊಲೀಸರು ಆತನನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!